ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

JW.ORG ವೆಬ್‌ಸೈಟ್‌

ಮೊಬೈಲ್‌ನಲ್ಲಿ JW.ORG ವೆಬ್‌ಸೈಟನ್ನು ಹೇಗೆ ಉಪಯೋಗಿಸಬಹುದು?

ಮೊಬೈಲ್‌ನಲ್ಲಿ JW.ORG ವೆಬ್‌ಸೈಟನ್ನು ಹೇಗೆ ಉಪಯೋಗಿಸಬಹುದು?

jw.org ವೆಬ್‌ಸೈಟನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ತೆರೆದಾಗ ಯಾವೆಲ್ಲಾ ವೆಬ್‌ಪೇಜ್‌ಗಳು ಮತ್ತು ವೈಶಿಷ್ಟ್ಯಗಳು ಸಿಗುತ್ತವೋ ಅವೆಲ್ಲಾ ನಿಮ್ಮ ಸ್ಮಾರ್ಟ್‌ಫೋನ್‌ಅಥವಾ ಟ್ಯಾಬ್‌ಲೆಟ್‌ಗಳಲ್ಲಿ ಕೂಡ ಸಿಗುತ್ತವೆ. ಆದರೆ ಕಂಪ್ಯೂಟರ್‌ಸ್ಕ್ರೀನಿಗೆ ಹೋಲಿಸುವುದಾದರೆ ಮೊಬೈಲ್‌ಸ್ಕ್ರೀನ್‌ ಚಿಕ್ಕದು. ಹಾಗಾಗಿ ವೆಬ್‌ಸೈಟಿನ ಮೆನು ಮತ್ತು ಸ್ಕ್ರೀನ್‌ಗಳು ಕಂಪ್ಯೂಟರ್‌ನಲ್ಲಿ ನೋಡುವಾಗ ಎಲ್ಲಿರುತ್ತವೋ ಮೊಬೈಲ್‌ನಲ್ಲಿ ಅದೇ ಸ್ಥಳದಲ್ಲಿರುವುದಿಲ್ಲ. ಈ ರೀತಿ ಜೋಡಿಸಿರುವುದರಿಂದ ಮೊಬೈಲ್‌ನಲ್ಲಿ ಸಹ ವೆಬ್‌ಸೈಟನ್ನು ಸುಲಭವಾಗಿ ಉಪಯೋಗಿಸಬಹುದು. ವೆಬ್‌ಸೈಟಿನಿಂದ ನಿಮಗೆ ಬೇಕಾದದ್ದನ್ನು ಮೊಬೈಲ್‌ನಲ್ಲಿ ಕಂಡುಕೊಳ್ಳಲು ನೆರವಾಗುವ ಕೆಲವು ಸಲಹೆಗಳು ಇಲ್ಲಿವೆ.

 ಮೊಬೈಲ್‌ಗಾಗಿ ಮಾಡಲಾಗಿರುವ ಮೆನುವನ್ನು ಬಳಸಿ

ಕಂಪ್ಯೂಟರ್‌ನಲ್ಲಿ ನೀವು ವೆಬ್‌ಸೈಟನ್ನು ತೆರೆದಾಗ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಮುಖ್ಯ ವಿಭಾಗಗಳು ಕಂಡುಬರುತ್ತವೆ. ಎಡಭಾಗದಲ್ಲಿ ಉಪವಿಭಾಗಗಳು ಉದ್ದವಾಗಿ ಕಂಡುಬರುತ್ತವೆ.

ಆದರೆ ಮೊಬೈಲ್‌ನಲ್ಲಿ ಎಲ್ಲಾ ವಿಭಾಗಗಳೂ ಎಡಭಾಗದಲ್ಲಿ ಕಂಡುಬರುತ್ತವೆ. ಮೆನುವನ್ನು ಉಪಯೋಗಿಸದಿರುವಾಗ ಅವು ಕಾಣಿಸುವುದಿಲ್ಲ. ಹಾಗಾಗಿ, ನೀವು ಏನನ್ನು ನೋಡುತ್ತಿರುತ್ತಿರೋ ಅದನ್ನು ಸ್ಕ್ರೀನ್‌ ಪೂರ್ತಿ ನೋಡಬಹುದು.

  • ವಿಭಾಗಗಳನ್ನು ನೋಡಲು ಅಥವಾ ಮರೆಮಾಡಲು ಮೆನುವನ್ನು ಸೂಚಿಸುವ ಈ ಚಿಹ್ನೆಯ ಮೇಲೆ ಒತ್ತಿ. ನಿರ್ದಿಷ್ಟ ವಿಭಾಗಕ್ಕೆ ಹೋಗಲು ಅದರ ಹೆಸರಿನ ಮೇಲೆ ಒತ್ತಿ.

  • ಈ ಚಿಹ್ನೆಯ ಮೇಲೆ ಒತ್ತಿದರೆ ಮುಖ್ಯ ವಿಭಾಗದಲ್ಲಿರುವ ಉಪವಿಭಾಗಗಳು ತೆರೆದುಕೊಳ್ಳುತ್ತವೆ. ಆಗ ಅಲ್ಲಿ ನಿಮಗೆ ಬೇಕಾದದ್ದನ್ನು ಆರಿಸಿಕೊಳ್ಳಲು ಅವುಗಳ ಮೇಲೆ ಕ್ಲಿಕ್ಕಿಸಿ.

  • ಈ ಚಿಹ್ನೆಯ ಮೇಲೆ ಒತ್ತಿದರೆ ಈಗಾಗಲೇ ಕಾಣುತ್ತಿರುವ ಉಪವಿಭಾಗಗಳು ಮರೆಯಾಗುತ್ತವೆ.

  • ಈ ಚಿಹ್ನೆಯ ಮೇಲೆ ಒತ್ತಿದರೆ ವೆಬ್‌ಸೈಟಿನ ಮುಖಪುಟಕ್ಕೆ ಹೋಗಬಹುದು.

  • ಈ ಚಿಹ್ನೆಯ ಮೇಲೆ ಒತ್ತಿದರೆ ವೆಬ್‌ಸೈಟ್‌ ಯಾವೆಲ್ಲಾ ಭಾಷೆಗಳಲ್ಲಿ ಲಭ್ಯವಿದೆಯೋ ಆ ಭಾಷೆಗಳ ಪಟ್ಟಿ ಕಾಣುತ್ತದೆ.

  • ಈ ಚಿಹ್ನೆಯ ಮೇಲೆ ಒತ್ತಿದರೆ ನಿಮಗೆ ಬೇಕಾದ ವಿಷಯವನ್ನು ಟೈಪ್‌ ಮಾಡಿ ಹುಡುಕಬಹುದು.

 ನಿರ್ದಿಷ್ಟ ಪ್ರಕಾಶನದ ಲೇಖನ ಮತ್ತು ಅಧ್ಯಾಯಗಳನ್ನು ನೋಡಿ

ಪ್ರಕಾಶನದಲ್ಲಿರುವ ಲೇಖನ ಅಥವಾ ಅಧ್ಯಾಯಗಳನ್ನು ಕಂಪ್ಯೂಟರ್‌ನಲ್ಲಿ ಓದುತ್ತಿರುವಾಗ ಪರಿವಿಡಿ ಕಾಣುತ್ತದೆ. ಆದರೆ ಮೊಬೈಲ್‌ನಲ್ಲಿ ಪರಿವಿಡಿ ಕಾಣುವುದಿಲ್ಲ.

  • ಈ ಚಿಹ್ನೆಯ ಮೇಲೆ ಒತ್ತಿದರೆ ಪರಿವಿಡಿ ಕಾಣುತ್ತದೆ. ಆಗ ಅದರಲ್ಲಿರುವ ಶೀರ್ಷಿಕೆಯೊಂದರ ಮೇಲೆ ಕ್ಲಿಕ್ಕಿಸಿ ಲೇಖನ ಅಥವಾ ಅಧ್ಯಾಯವನ್ನು ಆರಿಸಿಕೊಳ್ಳಬಹುದು.

  • ಈ ಚಿಹ್ನೆಯ ಮೇಲೆ ಒತ್ತಿದರೆ ಹಿಂದಿನ ಲೇಖನಕ್ಕೆ ಅಥವಾ ಅಧ್ಯಾಯಕ್ಕೆ ಹೋಗಬಹುದು.

  • ಈ ಚಿಹ್ನೆಯ ಮೇಲೆ ಒತ್ತಿದರೆ ಮುಂದಿನ ಲೇಖನಕ್ಕೆ ಅಥವಾ ಅಧ್ಯಾಯಕ್ಕೆ ಹೋಗಬಹುದು.

  • ಈ ಚಿಹ್ನೆಯ ಮೇಲೆ ಒತ್ತಿದರೆ ಕಾಣುತ್ತಿರುವ ಪರಿವಿಡಿ ಮರೆಯಾಗುತ್ತದೆ ಮತ್ತು ನಿಮ್ಮ ಓದುವಿಕೆಯನ್ನು ಮುಂದುವರಿಸಬಹುದು.

 ಬೈಬಲನ್ನು ಆನ್‌ಲೈನ್‌ನಲ್ಲಿ ಓದಿ

ಬೈಬಲನ್ನು ಆನ್‌ಲೈನ್‌ನಲ್ಲಿ ಓದಲು ಪ್ರಕಾಶನಗಳು > ಬೈಬಲ್‌ ಎಂಬುದನ್ನು ಒತ್ತಿ ಅಥವಾ ಮುಖಪುಟದಲ್ಲಿರುವ ಬೈಬಲನ್ನು ಆನ್‌ಲೈನ್‌ನಲ್ಲಿ ಓದಿ ಎಂಬಲ್ಲಿ ಕ್ಲಿಕ್ಕಿಸಿ.

ಆಗ ಬೈಬಲಿನಲ್ಲಿರುವ ಪುಸ್ತಕಗಳ ಹೆಸರುಗಳು ಕಾಣುತ್ತವೆ. ಆಗ ನಿಮಗೆ ಬೇಕಾದ ಪುಸ್ತಕದ ಮೇಲೆ ಕ್ಲಿಕ್ಕಿಸಿದರೆ, ಅಧ್ಯಾಯಗಳ ಸಂಖ್ಯೆಗಳು ಕಂಡುಬರುತ್ತವೆ. ನಿಮಗೆ ಯಾವ ಅಧ್ಯಾಯ ಬೇಕೋ ಆ ಅಧ್ಯಾಯವನ್ನು ಆರಿಸಿಕೊಂಡು ತೆರೆ ಎಂಬಲ್ಲಿ ಒತ್ತಿ.

  • ಈ ಚಿಹ್ನೆಯ ಮೇಲೆ ಒತ್ತಿದರೆ ಬೈಬಲಿನ ಪರಿವಿಡಿಯ ಜೊತೆಗೆ ಅದರಲ್ಲಿರುವ ಪರಿಶಿಷ್ಟ ಮತ್ತು ಕಿರುಪರಿಚಯವನ್ನು ನೋಡಬಹುದು.

  • ಈ ಚಿಹ್ನೆಯ ಮೇಲೆ ಒತ್ತಿದರೆ ಹಿಂದಿನ ಅಧ್ಯಾಯಕ್ಕೆ ಹೋಗಬಹುದು.

  • ಈ ಚಿಹ್ನೆಯ ಮೇಲೆ ಒತ್ತಿದರೆ ಮುಂದಿನ ಅಧ್ಯಾಯಕ್ಕೆ ಹೋಗಬಹುದು.

  • ಈ ಚಿಹ್ನೆಯ ಮೇಲೆ ಒತ್ತಿದರೆ ಪರಿವಿಡಿ ಮರೆಯಾಗುತ್ತದೆ.

ಲೇಖನವೊಂದರ ಆಡಿಯೋ ರೆಕಾರ್ಡಿಂಗನ್ನು ಕೇಳಿ

ನೀವು ಓದುತ್ತಿರುವ ಲೇಖನದ ಆಡಿಯೋ ರೆಕಾರ್ಡಿಂಗ್‌ ಲಭ್ಯವಿರುವಲ್ಲಿ ಈ ಮೇಲಿನ ಪಟ್ಟಿ ಕಂಡುಬರುತ್ತದೆ.

  • ಅದರ ಆಡಿಯೋ ರೆಕಾರ್ಡಿಂಗ್‌ ಕೇಳಲು ಬಯಸುವಲ್ಲಿ ಪ್ಲೇ ಎಂದು ಸೂಚಿಸುವ ಈ ಚಿಹ್ನೆಯ ಮೇಲೆ ಒತ್ತಿ.

  •  ಆಡಿಯೋ ರೆಕಾರ್ಡಿಂಗನ್ನು ಮಧ್ಯದಲ್ಲಿ ನಿಲ್ಲಿಸಬೇಕೆಂದರೆ ಈ ಚಿಹ್ನೆಯ ಮೇಲೆ ಒತ್ತಿ. ಪುನಃ ಅದನ್ನು ಮುಂದುವರಿಸಲು ಪ್ಲೇ ಚಿಹ್ನೆಯ ಮೇಲೆ ಒತ್ತಿ.

  • ಆಡಿಯೋವನ್ನು ಕೇಳಿಸಿಕೊಳ್ಳುತ್ತಿರುವಾಗ ನೀವು ಹಿಂದೆ ಅಥವಾ ಮುಂದೆ ಹೋಗಲು ಇಲ್ಲಿ ಕಾಣುವ ಗೆರೆಯ ಮೇಲೆ ಒತ್ತಿ ಎಳೆಯಿರಿ.

ಆಡಿಯೋ ರೆಕಾರ್ಡಿಂಗನ್ನು ಕೇಳಿಸಿಕೊಳ್ಳುತ್ತಾ ಸ್ಕ್ರೀನ್‌ ಮೇಲೆ ಕಾಣುವ ಅದೇ ಲೇಖನವನ್ನು ಹಿಂಬಾಲಿಸಬಹುದು. ಹೀಗೆ ಓದುತ್ತಿರುವಾಗ ಆಡಿಯೋ ರೆಕಾರ್ಡಿಂಗ್‌ನ ಆ ಪಟ್ಟಿ ಸಹ ಹಾಗೆ ಕಾಣುತ್ತಿರುತ್ತದೆ. ಇದರಿಂದ ನಿಮಗೆ ಯಾವಾಗ ಬೇಕೋ ಆಗ ಪ್ಲೇ ಮಾಡಲೂಬಹುದು ಅಥವಾ ನಿಲ್ಲಿಸಲೂಬಹುದು.