ಮಾಹಿತಿ ಇರುವಲ್ಲಿ ಹೋಗಲು

ಪ್ರೈವೆಸಿ ಪಾಲಿಸಿ

ಪ್ರೈವೆಸಿ ಪಾಲಿಸಿ

ವೈಯಕ್ತಿಕ ಮಾಹಿತಿ

ಈ ವೆಬ್‌ಸೈಟಿಗೆ ನೀವು ನೀಡಿದ ವೈಯಕ್ತಿಕ ಮಾಹಿತಿಯನ್ನು Watchtower Bible and Tract Society of New York, Inc., ಅಥವಾ ಅದರ ಸಹಕಾರಿ ಸಂಸ್ಥೆಗಳು ಯಾವ ಉದ್ದೇಶಕ್ಕಾಗಿ ನಿಮ್ಮಿಂದ ಮಾಹಿತಿಯನ್ನು ಪಡೆಯಿತೋ ಆ ಉದ್ದೇಶಕ್ಕೆ ಮಾತ್ರ ಬಳಸುತ್ತವೆ. ಅದನ್ನು ಸಿಕ್ಕಸಿಕ್ಕವರಿಗೆ ಕೊಡುವುದಿಲ್ಲ. ನೀವು ಕೇಳಿದ ಸೇವೆಯನ್ನು ಒದಗಿಸಲು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೀರ ಅಗತ್ಯಬಿದ್ದರೆ ಮಾತ್ರ ಬೇರೆಯವರಿಗೆ ನೀಡುತ್ತದೆ. ಹೀಗೆ ಕೊಡುವಾಗ ಅದನ್ನು ಬಳಕೆದಾರರ ಗಮನಕ್ಕೆ ತರಲಾಗುತ್ತದೆ. ಕೆಲವು ಕಾನೂನು, ನಿಯಮಗಳ ಪಾಲನೆ, ಅಪರಾಧಗಳ ಪತ್ತೆ ಮತ್ತು ತಡೆ, ಭದ್ರತೆ, ತಾಂತ್ರಿಕ ಸಮಸ್ಯೆ ಇಂಥ ವಿಷಯಗಳು ಬಂದಾಗ ಈ ಕಾರಣಗಳಿಗಾಗಿಯೇ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಲಾಗುತ್ತದೆ ಎಂದು ಖಚಿತಪಡಿಸಿಕೊಂಡ ನಂತರ ಕೊಡಲಾಗುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡುವುದಿಲ್ಲ, ಬೇರೆ ವಸ್ತುಗಳಿಗಾಗಿ ವಿನಿಮಯ ಮಾಡುವುದಿಲ್ಲ, ಬಾಡಿಗೆಗೆ ನೀಡುವುದಿಲ್ಲ.

ಈ-ಮೇಲ್‌ ವಿಳಾಸ

ಈ ವೆಬ್‌ಸೈಟ್‌ನಲ್ಲಿ ಅಕೌಂಟ್‌ ತೆರೆಯುವಾಗ ನೀವು ನೀಡುವ ಈ-ಮೇಲ್‌ ವಿಳಾಸವನ್ನು ನಿಮ್ಮ ಅಕೌಂಟ್‌ ವಿಚಾರದಲ್ಲಿ ನಿಮ್ಮನ್ನು ಸಂಪರ್ಕಿಸಲು ಬಳಸಲಾಗುತ್ತದೆ. ಉದಾಹರಣೆಗೆ, ನಿಮ್ಮ ಯೂಸರ್‌ ನೇಮ್‌ ಅಥವಾ ಪಾಸ್‌ವರ್ಡ್‌ ಮರೆತದ್ದರಿಂದ ಲಾಗ್‌ ಇನ್‌ ಆಗಲು ನೀವು ಸಹಾಯ ಕೋರುವಲ್ಲಿ ನಿಮ್ಮ ಈ-ಮೇಲ್‌ ವಿಳಾಸಕ್ಕೆ ಮೆಸೆಜ್‌ ಕಳುಹಿಸುವ ಮೂಲಕ ಸಹಾಯವನ್ನು ನೀಡಲಾಗುತ್ತದೆ.

ಕುಕೀಸ್‌

jw.org ವೆಬ್‌ಸೈಟನ್ನು ಉಪಯೋಗಿಸುವವರು ಮಾಡಿರುವ ಆಯ್ಕೆಗಳನ್ನು ಜ್ಞಾಪಕದಲ್ಲಿಡಲು ಕುಕೀಸ್‌ಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಈ ವೆಬ್‌ಸೈಟನ್ನು ನೋಡಲು ನಿರ್ದಿಷ್ಟ ಭಾಷೆಯೊಂದನ್ನು ಒಬ್ಬರು ಆರಿಸಿರುವಲ್ಲಿ ಆ ವ್ಯಕ್ತಿ ಪುನಃ jw.org ವೆಬ್‌ಸೈಟನ್ನು ತೆರೆಯುವುದಾದರೆ ಈ ಹಿಂದೆ ಆಯ್ಕೆಮಾಡಿದ ಭಾಷೆಯಲ್ಲೇ ಆ ವೆಬ್‌ಸೈಟ್‌ ತೆರೆಯುತ್ತದೆ. ಆದರೆ ಕುಕೀಸ್‌ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ.

ಆಕ್ಟಿವ್‌ ಸ್ಕ್ರಿಪ್ಟಿಂಗ್‌ ಅಥವಾ ಜಾವಾಸ್ಕ್ರಿಪ್ಟ್‌

jw.org ವೆಬ್‌ಸೈಟ್‌ ಇನ್ನೂ ಚೆನ್ನಾಗಿ ಕೆಲಸಮಾಡಬೇಕು ಎನ್ನುವ ಉದ್ದೇಶದಿಂದ ಸ್ಕ್ರಿಪ್ಟಿಂಗನ್ನು ಉಪಯೋಗಿಸಲಾಗಿದೆ. ಸ್ಕ್ರಿಪ್ಟಿಂಗ್‌ ತಂತ್ರಜ್ಞಾನವನ್ನು ಬಳಸಿದ ಕಾರಣ jw.org ಮಾಹಿತಿಯನ್ನು ಕಡಿಮೆ ಸಮಯದಲ್ಲಿ ಅದರ ಬಳಕೆದಾರರಿಗೆ ತಲುಪಿಸಲು ಸಾಧ್ಯವಾಗಿದೆ. ಈ ವೆಬ್‌ಸೈಟನ್ನು ಬಳಸುವವರ ಕಂಪ್ಯೂಟರಿನಲ್ಲಿ ಯಾವುದೇ ರೀತಿಯ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್‌ ಮಾಡಲು ಅಥವಾ ಅದನ್ನು ಉಪಯೋಗಿಸುವವರಿಂದ ಯಾವುದೇ ಅನಧಿಕೃತ ಮಾಹಿತಿಯನ್ನು ಸಂಗ್ರಹಿಸಲು jw.org ಸ್ಕ್ರಿಪ್ಟಿಂಗನ್ನು ಬಳಸುವುದಿಲ್ಲ.

jw.org ವೆಬ್‌ಸೈಟಿನ ಕೆಲವೊಂದು ವಿಷಯಗಳು ಸರಿಯಾಗಿ ಕೆಲಸಮಾಡಬೇಕಾದರೆ ಬ್ರೌಸರ್‌ನ ಆಕ್ಟಿವ್‌ ಸ್ಕ್ರಿಪ್ಟಿಂಗ್‌ ಅಥವಾ ಜಾವಾಸ್ಕ್ರಿಪ್ಟ್‌ ಅನ್ನು ಎನೇಬಲ್‌ ಮಾಡಬೇಕು. ಯಾವ ವೆಬ್‌ಸೈಟ್‌ಗಳಿಗೆ ಇದನ್ನು ಎನೇಬಲ್‌ ಮಾಡಬೇಕು, ಯಾವುದಕ್ಕೆ ಡಿಸೇಬಲ್‌ ಮಾಡಬೇಕು ಎನ್ನುವುದನ್ನು ಹೆಚ್ಚಿನ ವೆಬ್‌ ಬ್ರೌಸರ್‌ಗಳು ತಾವೇ ನಿರ್ಧರಿಸುತ್ತವೆ. ನೀವು ಆರಿಸುವ ಕೆಲವು ವೆಬ್‌ಸೈಟ್‌ಗಳಿಗೆ ಸ್ಕ್ರಿಪ್ಟಿಂಗ್‌ ಬೇಕೆಂದರೆ ಅದನ್ನು ಹೇಗೆ ಎನೇಬಲ್‌ ಮಾಡಬಹುದೆಂದು ತಿಳಿಯಲು ನಿಮ್ಮ ವೆಬ್‌ ಬ್ರೌಸರ್‌ನ ಹೆಲ್ಪ್‌ ಡಾಕ್ಯುಮೆಂಟೇಶನ್‌ ಅನ್ನು ದಯವಿಟ್ಟು ನೋಡಿ.

ಪ್ರೈವೆಸಿ ಪಾಲಿಸಿಯಲ್ಲಿ ಮುಂದೆ ಯಾವುದಾದರೂ ಬದಲಾವಣೆಗಳನ್ನು ಮಾಡುವುದಾದರೆ ಅದನ್ನು ಈ ಪುಟದಲ್ಲಿ ಸೇರಿಸಲಾಗುತ್ತದೆ. ನಾವು ಯಾವ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಅದನ್ನು ಹೇಗೆ ಉಪಯೋಗಿಸುತ್ತಿದ್ದೇವೆ ಎನ್ನುವುದನ್ನು ನಿಮಗೆ ತಿಳಿಸುವುದೇ ಇದರ ಉದ್ದೇಶ.