ಮಾಹಿತಿ ಇರುವಲ್ಲಿ ಹೋಗಲು

ಟುರಿನ್‌ ಶಾಲನ್ನು ಯೇಸುವಿನ ಮೃತದೇಹಕ್ಕೆ ಸುತ್ತಲು ಬಳಸಿದ್ದರಾ?

ಟುರಿನ್‌ ಶಾಲನ್ನು ಯೇಸುವಿನ ಮೃತದೇಹಕ್ಕೆ ಸುತ್ತಲು ಬಳಸಿದ್ದರಾ?

ಬೈಬಲ್‌ ಕೊಡುವ ಉತ್ತರ

 ಟುರಿನ್‌ ಶಾಲಿನ ಬಗ್ಗೆ ಬೈಬಲಲ್ಲಿ ಎಲ್ಲೂ ಇಲ್ಲ. ನಾರಿನಿಂದ ಮಾಡಿದ ಈ ಉದ್ದ ಶಾಲಿನಿಂದ ಯೇಸುವಿನ ಮೃತದೇಹವನ್ನು ಸುತ್ತಿದರು ಅಂತ ತುಂಬ ಜನ ನಂಬುತ್ತಾರೆ. ಹಾಗಾಗಿ ಇದು ಚರ್ಚಿನ ಪವಿತ್ರ ವಸ್ತು ಎಂದು ಕೆಲವರು ನೆನಸುತ್ತಾರೆ. ಇಟಲಿಯ ಟುರಿನ್‌ ನಗರದ ಮುಖ್ಯ ಚರ್ಚಿನಲ್ಲಿ ಉನ್ನತ ತಂತ್ರಜ್ಞಾನಗಳನ್ನು ಬಳಸಿ ಈ ಟುರಿನ್‌ ಶಾಲನ್ನು ತುಂಬ ಜೋಪಾನವಾಗಿ ಇಟ್ಟಿದ್ದಾರೆ.

 ಟುರಿನ್‌ ಶಾಲು ಯೇಸುವಿನದ್ದು ಎಂದು ಬೈಬಲ್‌ ಒಪ್ಪುತ್ತಾ? ಇಲ್ಲ.

 ಟುರಿನ್‌ ಶಾಲಿಗೂ ಬೈಬಲಲ್ಲಿರುವ ಮಾಹಿತಿಗೂ ಏನು ವ್ಯತ್ಯಾಸ ಅನ್ನುವುದಕ್ಕೆ 3 ವಿಷಯ ನೋಡಿ.

  1.   ಟುರಿನ್‌ ಶಾಲು 442 ಸೆಂ.ಮೀ. ಉದ್ದ 113 ಸೆಂ.ಮೀ ಅಗಲ (14 ಅಡಿ 6 ಇಂಚು ಉದ್ದ, 3 ಅಡಿ 8 ಇಂಚು ಅಗಲ) ಇದೆ. ಅಲ್ಲದೆ 8 ಸೆಂ.ಮೀ. (3 ಇಂಚು) ಉದ್ದ ಬಟ್ಟೆಯನ್ನು ಅದಕ್ಕೆ ಸೇರಿಸಿ ನೀಳವಾಗಿ ಹೊಲಿದಿದ್ದಾರೆ.

     ಬೈಬಲ್‌ ಏನು ಹೇಳುತ್ತದೆ? ಯೇಸುವಿನ ಮೃತದೇಹವನ್ನು ಸುತ್ತಲು ತುಂಬ ಬಟ್ಟೆ ತುಂಡುಗಳನ್ನು ಬಳಸಿದರು, ಬರೀ ಒಂದು ನಾರಿನಬಟ್ಟೆಯನ್ನು ಬಳಸಲಿಲ್ಲ. ತಲೆಯನ್ನು ಮಾತ್ರ ಒಂದು ಬಟ್ಟೆಯಲ್ಲಿ ಸುತ್ತಿದ್ದರು. ಯೇಸು ಪುನಃ ಜೀವಂತವಾಗಿ ಎದ್ದಾಗ ಅವನ ಅಪೊಸ್ತಲರಲ್ಲಿ ಒಬ್ಬ ಖಾಲಿ ಸಮಾಧಿ ಹತ್ತಿರ ಬಂದು ಅಲ್ಲಿ ‘ನಾರು ಬಟ್ಟೆಗಳು ಬಿದ್ದಿರುವುದನ್ನು ನೋಡಿದನು.’ ಅಲ್ಲದೆ ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆ ಆ ನಾರುಬಟ್ಟೆಗಳ ಜೊತೆ ಇರದೆ ಸುತ್ತಿ ಬೇರೆ ಕಡೆ ಇತ್ತು ಎಂದು ಸಹ ಬೈಬಲ್‌ ಹೇಳುತ್ತದೆ.—ಯೋಹಾನ 20:6, 7 ಸತ್ಯವೇದವು.

  2.   ಟುರಿನ್‌ ಶಾಲಿನಲ್ಲಿ ರಕ್ತದ ಕಲೆಗಳು ಇವೆ. ಆ ಕಲೆಗಳು ತೊಳೆಯದ ಶವಶರೀರದ್ದು.

     ಬೈಬಲ್‌ ಏನು ಹೇಳುತ್ತದೆ? ಯೇಸು ಸತ್ತ ಮೇಲೆ ಅವನ ಶಿಷ್ಯರು ಅವನ ‘ದೇಹವನ್ನು ತಗೊಂಡು ಯೆಹೂದ್ಯರ ಪದ್ಧತಿ ಪ್ರಕಾರ ಸುಗಂಧದ್ರವ್ಯ ಹಾಕಿದರು.’ (ಯೋಹಾನ 19:39-42) ಈ ಪದ್ಧತಿಯಲ್ಲಿ ಮೃತದೇಹಕ್ಕೆ ಸ್ನಾನ ಮಾಡಿಸಿ ಎಣ್ಣೆ, ಸುಗಂಧದ್ರವ್ಯಗಳನ್ನು ಹಚ್ಚುವುದು ಸೇರಿದೆ. (ಮತ್ತಾಯ 26:12; ಅಪೊಸ್ತಲರ ಕಾರ್ಯ 9:37) ಹಾಗಾಗಿ ಯೇಸುವಿನ ಶಿಷ್ಯರು ಅವನ ಮೃತದೇಹಕ್ಕೆ ಬಟ್ಟೆಗಳನ್ನು ಸುತ್ತುವುದಕ್ಕಿಂತ ಮುಂಚೆ ಸ್ನಾನಮಾಡಿಸಿರುತ್ತಾರೆ.

  3.   ಟುರಿನ್‌ ಶಾಲಿನಲ್ಲಿ ಒಬ್ಬ ಗಂಡಸಿನ ಚಿತ್ರ ಇದೆ. ದಿ ಎನ್‌ಸೈಕ್ಲಪೀಡಿಯ ಬ್ರಿಟಾನಿಕ ಪ್ರಕಾರ “ಆ ಶಾಲಿನ ಅರ್ಧ ಭಾಗದ ಮೇಲೆ ಅವನನ್ನು ನೀಳವಾಗಿ ಮಲಗಿಸಲಾಯಿತು. ಇನ್ನು ಅರ್ಧ ಶಾಲನ್ನು ಅವನ ಮೇಲೆ ಹಾಕಿ ತಲೆಯಿಂದ ಕಾಲಿನ ತನಕ ಮುಚ್ಚಲಾಯ್ತು.”

     ಬೈಬಲ್‌ ಏನು ಹೇಳುತ್ತದೆ? ಯೇಸುವಿನ ಶಿಷ್ಯರು ಅವನ ಸಾವಿನ ಬಗ್ಗೆ, ಅವನ ಸಮಾಧಿ ಖಾಲಿಯಾಗಿ ಇದ್ದದ್ದರ ಬಗ್ಗೆ ತಮ್ಮತಮ್ಮಲ್ಲಿ ಮಾತಾಡಿಕೊಳ್ಳುತ್ತಾ ಇದ್ದರು. ಯೇಸುವಿಗೆ ಮತ್ತೆ ಜೀವ ಬಂತು ಎಂದು ದೇವದೂತರು ಕಾಣಿಸಿಕೊಂಡು ಹೇಳಿದ ಮಾತನ್ನು ಸ್ತ್ರೀಯರು ಬಂದು ತಿಳಿಸಿದಾಗ ಅದರ ಬಗ್ಗೆನೂ ಚರ್ಚಿಸುತ್ತಾ ಇದ್ದರು. (ಲೂಕ 24:15-24) ಒಂದುವೇಳೆ ಆ ಟುರಿನ್‌ ಶಾಲು ಆ ಸಮಾಧಿಯಲ್ಲಿ ಇದ್ದಿದ್ದರೆ ಅದರ ಬಗ್ಗೆ, ಅದರಲ್ಲಿರುವ ಚಿತ್ರದ ಬಗ್ಗೆ ಕೂಡ ಶಿಷ್ಯರು ಮಾತಾಡುತ್ತಿದ್ದರು ಅಲ್ಲವಾ? ಆದರೆ ಹಾಗೆ ಮಾತಾಡಿದರು ಅಂತ ಬೈಬಲಲ್ಲಿ ಎಲ್ಲೂ ಇಲ್ಲ.

ಆ ಶಾಲನ್ನು ಪೂಜಿಸಬೇಕಾ?

 ಇಲ್ಲ. ಒಂದುವೇಳೆ ಆ ಶಾಲನ್ನೇ ಯೇಸುವಿನ ಮೃತದೇಹಕ್ಕೆ ಹಾಕಿದ್ದರೂ ಅದನ್ನು ಪೂಜಿಸುವುದು ತಪ್ಪು. ಯಾಕೆ? ಕೆಲವು ಬೈಬಲ್‌ ತತ್ವಗಳನ್ನು ಗಮನಿಸಿ.

  1.   ಪೂಜಿಸುವ ಅಗತ್ಯ ಇಲ್ಲ. “ದೇವರು ಕಣ್ಣಿಗೆ ಕಾಣಿಸಲ್ಲ. ಆತನನ್ನ ಆರಾಧಿಸುವವರು ಪವಿತ್ರಶಕ್ತಿಗೆ ಮತ್ತು ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು” ಎಂದು ಯೇಸುವೇ ಹೇಳಿದ್ದಾನೆ. (ಯೋಹಾನ 4:24) ಸತ್ಯ ಆರಾಧನೆಯಲ್ಲಿ ವಿಗ್ರಹಗಳನ್ನಾಗಲಿ ವಸ್ತುಗಳನ್ನಾಗಲಿ ಪೂಜಿಸುವುದಿಲ್ಲ.

  2.   ಅದನ್ನೆಲ್ಲ ಉಪಯೋಗಿಸಬಾರದು ಎಂದು ದೇವರು ಹೇಳಿದ್ದಾನೆ. ವಿಗ್ರಹ ಆರಾಧನೆ ಮಾಡಬಾರದು ಅಂತ ದಶಾಜ್ಞೆಗಳಲ್ಲಿ ಇದೆ. (ಧರ್ಮೋಪದೇಶಕಾಂಡ 5:6-10) ಮೂರ್ತಿಗಳಿಂದ ದೂರವಿರಿ ಎಂದು ಬೈಬಲ್‌ ಕ್ರೈಸ್ತರಿಗೆ ಆಜ್ಞೆ ಕೊಟ್ಟಿದೆ. (1 ಯೋಹಾನ 5:21) ‘ಟುರಿನ್‌ ಶಾಲನ್ನು ನಾವು ಒಂದು ವಿಗ್ರಹವಾಗಿ ನೋಡಲ್ಲ, ನಮ್ಮ ಧಾರ್ಮಿಕ ನಂಬಿಕೆಗೆ ಅದೊಂದು ಗುರುತು, ಚಿಹ್ನೆ ಅಷ್ಟೇ’ ಎಂದು ಕೆಲವರು ಹೇಳುತ್ತಾರೆ. ಆದರೆ ಒಂದು ಚಿಹ್ನೆಯನ್ನು ಪೂಜೆ ಮಾಡಿದರೆ ಅದೊಂದು ವಿಗ್ರಹ ಆಗಿಬಿಡುತ್ತೆ. ಹಾಗಾಗಿ ದೇವರನ್ನು ಮೆಚ್ಚಿಸಲಿಕ್ಕೆ ಯಾರೂ ಕೂಡ ಯಾವುದೇ ವಸ್ತುವನ್ನು, ಟುರಿನ್‌ ಶಾಲನ್ನು ಕೂಡ ಪೂಜಿಸುವುದಿಲ್ಲ.