ಮಾಹಿತಿ ಇರುವಲ್ಲಿ ಹೋಗಲು

“ಎಲ್ಲರೂ ನಿಮ್ಮನ್ನು ನೋಡಿ ಕಲಿಯಬೇಕು!”

“ಎಲ್ಲರೂ ನಿಮ್ಮನ್ನು ನೋಡಿ ಕಲಿಯಬೇಕು!”

ಸಿಸಿಲಿ ದ್ವೀಪದ ಸಾಪೊನೊರಾ ಎಂಬ ಪಟ್ಟಣದಲ್ಲಿ ದೊಡ್ಡ ನೆರೆ ಬಂತು. ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳು ಮಾಡಿದ ಪರಿಹಾರಕಾರ್ಯಕ್ಕಾಗಿ ಗೌರವಾನ್ವಿತ ಫಲಕ ಪಡೆದರು.

ಇಸವಿ 2011 ನವೆಂಬರ್‌ 22ರಂದು, ಮೆಸ್ಸೀನಾ ಪ್ರಾಂತ್ಯದ ಕೆಲವು ಪಟ್ಟಣಗಳು ಮತ್ತು ಹಳ್ಳಿಗಳು ನೆರೆಯಲ್ಲಿ ಮುಳುಗಿದವು. ಅದೇ ಸಾಯಂಕಾಲ ಸಾಪೊನೊರಾದಲ್ಲಿ ಭೂಕುಸಿತದಿಂದಾಗಿ ಮೂರು ಜನ ಅಸುನೀಗಿದರು. ಅದರಲ್ಲಿ ಒಂದು ಮಗು ಮತ್ತು ಇಬ್ಬರು ವಯಸ್ಕರಿದ್ದರು.

ವಿಪತ್ತು ಸಂಭವಿಸಿದ ಕೂಡಲೇ ಯೆಹೋವನ ಸಾಕ್ಷಿಗಳ ಸ್ವಯಂಸೇವಕರು ಬಂದರು. ತಂಡ-ತಂಡಗಳಾಗಿ ನೆರೆ ಪೀಡಿತ ಸ್ಥಳಗಳಲ್ಲಿ ಚೆಲ್ಲಾಪಿಲ್ಲಿಯಾಗಿರುವ ಕಸವನ್ನು ಒಟ್ಟುಮಾಡಿದರು.

ಅಲ್ಲಿನ ಅಧಿಕಾರಿಗಳಿಗೂ ಸಹ ನೆರವಿನ ಅಗತ್ಯವಿರುವ ಕಡೆಗಳಿಗೆಲ್ಲ ಯೆಹೋವನ ಸಾಕ್ಷಿಗಳು ಕೈಜೊಡಿಸಿ ನೆರವಾದರು. ತುರ್ತು ನೆರವು ನೀಡಿದ ನಂತರ ಕೂಡ ಅವರು ಕೆಲಸವನ್ನು ಮುಂದುವರಿಸಿದರು. 50ರಿಂದ 80 ಯೆಹೋವನ ಸಾಕ್ಷಿಗಳು ಪರಿಹಾರಕಾರ್ಯದಲ್ಲಿ ಸಹಾಯಮಾಡಿದರು. ಅವರಲ್ಲಿ ಕೆಲವರು 97 ಕಿ.ಮೀ ದೂರದಿಂದ ಬಂದವರಾಗಿದ್ದರು.

ಈ ನೈಸರ್ಗಿಕ ವಿಪತ್ತಿಗೆ ತುತ್ತಾದ ಅನೇಕ ಸ್ಥಳೀಯರು ಯೆಹೋವನ ಸಾಕ್ಷಿಗಳನ್ನು ಪ್ರಶಂಸಿಸಿದರು. ಅಲ್ಲಿನ ಮೇಯರ್‌ ಸಹ “ಎಲ್ಲರೂ ನಿಮ್ಮನ್ನು ನೋಡಿ ಕಲಿಯಬೇಕು!” ಎಂದು ಮತ್ತೆಮತ್ತೆ ಹೇಳಿದರು.

ಐದು ತಿಂಗಳ ನಂತರ ಪುರಸಭೆಯ ಪರವಾಗಿ ಅದರ ಅಧ್ಯಕ್ಷರಾದ ಫ್ಯಾಬಿಯೋ ವಿಂಚೀ ಅಲ್ಲಿನ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಗೌರವಾನ್ವಿತ ಪದವಿಯನ್ನು ನೀಡಿ ಗೌರವಿಸಿದರು.