ಮಾಹಿತಿ ಇರುವಲ್ಲಿ ಹೋಗಲು

ದಶಮಾಂಶ ತೆಗೆದುಕೊಳ್ಳುವ ಪದ್ಧತಿ ಯೆಹೋವನ ಸಾಕ್ಷಿಗಳಲ್ಲಿದೆಯೋ?

ದಶಮಾಂಶ ತೆಗೆದುಕೊಳ್ಳುವ ಪದ್ಧತಿ ಯೆಹೋವನ ಸಾಕ್ಷಿಗಳಲ್ಲಿದೆಯೋ?

 ಯೆಹೋವನ ಸಾಕ್ಷಿಗಳಲ್ಲಿ ದಶಮಾಂಶ ತೆಗೆದುಕೊಳ್ಳುವ ಪದ್ಧತಿಯಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳಿಂದ ನಮ್ಮ ಕೆಲಸಗಳು ನಡೆಯುತ್ತವೆ. ದಶಮಾಂಶವೆಂದರೇನು ಮತ್ತು ಯೆಹೋವನ ಸಾಕ್ಷಿಗಳಲ್ಲಿ ದಶಮಾಂಶವನ್ನು ತೆಗೆದುಕೊಳ್ಳುವ ಪದ್ಧತಿಯಿಲ್ಲವೇಕೆ?

 ದಶಮಾಂಶ ಅಥವಾ ಹತ್ತರಲ್ಲಿ ಒಂದು ಭಾಗವನ್ನು ಸಲ್ಲಿಸಬೇಕೆಂಬ ಆಜ್ಞೆ, ಪುರಾತನ ಇಸ್ರಾಯೇಲ್‌ ಜನಾಂಗಕ್ಕೆ ಕೊಡಲಾಗಿದ್ದ ಧರ್ಮಶಾಸ್ತ್ರದ ಭಾಗವಾಗಿತ್ತು. ಆದರೆ ಧರ್ಮಶಾಸ್ತ್ರವಾಗಲಿ, ಅದರ ಭಾಗವಾಗಿರುವ ‘ದಶಮಭಾಗಗಳನ್ನು ಸಂಗ್ರಹಿಸುವ ಆಜ್ಞೆಯಾಗಲಿ’ ಕ್ರೈಸ್ತರಿಗೆ ಅನ್ವಯಿಸುವುದಿಲ್ಲವೆಂದು ಬೈಬಲ್‌ ಸ್ಪಷ್ಟಪಡಿಸುತ್ತದೆ.​—ಇಬ್ರಿಯ 7:​5, 18; ಕೊಲೊಸ್ಸೆ 2:​13, 14.

 ಯೆಹೋವನ ಸಾಕ್ಷಿಗಳಲ್ಲಿ ದಶಮಾಂಶವನ್ನು ಮತ್ತು ಕಾಣಿಕೆಯನ್ನು ಕೊಡಬೇಕೆಂಬ ಒತ್ತಾಯವಿಲ್ಲ. ಬದಲಿಗೆ, ಅವರು ಆದಿಕಾಲದ ಕ್ರೈಸ್ತರನ್ನು ಅನುಕರಿಸುತ್ತಾ, ಎರಡು ರೀತಿಗಳಲ್ಲಿ ತಮ್ಮ ಶುಶ್ರೂಷೆಯನ್ನು ಬೆಂಬಲಿಸುತ್ತಾರೆ: ಸುವಾರ್ತೆ ಸಾರುವ ಕೆಲಸದಲ್ಲಿ ಯಾವುದೇ ಲಾಭವನ್ನು ಅಪೇಕ್ಷಿಸದೆ ಭಾಗವಹಿಸುತ್ತಾರೆ ಮತ್ತು ಸ್ವಯಂಪ್ರೇರಿತ ಕಾಣಿಕೆಗಳನ್ನು ನೀಡುತ್ತಾರೆ.

 ಹೀಗೆ, ಕ್ರೈಸ್ತರಾಗಿರುವ ನಾವು ಬೈಬಲಿನ ಈ ಮಾರ್ಗದರ್ಶನವನ್ನು ಪಾಲಿಸುತ್ತೇವೆ: “ಪ್ರತಿಯೊಬ್ಬನು ಒಲ್ಲದ ಮನಸ್ಸಿನಿಂದಾಗಲಿ ಒತ್ತಾಯದಿಂದಾಗಲಿ ಮಾಡದೆ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.”—2 ಕೊರಿಂಥ 9:7.