ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಬೈಬಲ್‌ ನಿಜಕ್ಕೂ ದೇವರ ಪುಸ್ತಕನಾ?

ಬೈಬಲನ್ನು ನಿಜವಾಗಿಯೂ ದೇವರೇ ಬರೆಸಿದ್ದಾ?

ಬೈಬಲನ್ನು ನಿಜವಾಗಿಯೂ ದೇವರೇ ಬರೆಸಿದ್ದಾ?

ಬೈಬಲನ್ನು ಬರೆಸಿದ್ದು ದೇವರೇ ಅಂತ ನೀವು ನಂಬುತ್ತೀರಾ? ಅಥವಾ ಮನುಷ್ಯರು ಅವರಿಗನಿಸಿದ್ದನ್ನು ಬರೆದಿದ್ದಾರೆ ಅಂತ ನಿಮಗನಿಸುತ್ತಾ?

ಕ್ರೈಸ್ತರು ಅಂತ ಹೇಳಿಕೊಳ್ಳುವ ಅನೇಕರ ಮಧ್ಯೆ ಇದು ಮುಗಿಯದ ಚರ್ಚೆಯಾಗಿದೆ. ಉದಾಹರಣೆಗೆ, ಅಮೆರಿಕಾದಲ್ಲಿ ನಡೆದ 2014ರ ಸಮೀಕ್ಷೆ ಒಂದರಲ್ಲಿ ಕ್ರೈಸ್ತರೆಂದು ಹೇಳಿಕೊಳ್ಳುವವರಲ್ಲಿ ಹೆಚ್ಚಿನ ಜನ ‘ಬೈಬಲ್‌ ಬರೆಸುವುದರಲ್ಲಿ ಸ್ವಲ್ಪನಾದರೂ ದೇವರ ಕೈ ಇದೆ’ ಅಂತ ಹೇಳಿದರು. ಆದರೆ ಸಮೀಕ್ಷೆಯಲ್ಲಿನ ಪ್ರತಿ 5 ಜನರಲ್ಲಿ ಒಬ್ಬರು ಬೈಬಲಲ್ಲಿರೋದು “ಹಳೇಕಾಲದ ಕಥೆಗಳು, ಇತಿಹಾಸ ಮತ್ತು ಮನುಷ್ಯರ ಯೋಚನೆಗಳು ಅಷ್ಟೆ” ಎಂದು ಹೇಳಿದರು. ಆದರೆ ಬೈಬಲ್‌ “ದೇವರಿಂದ ಪ್ರೇರಿತವಾಗಿದೆ” ಅಂತ ಸ್ವತಃ ಬೈಬಲೇ ಹೇಳುತ್ತದೆ. ಏನಿದರ ಅರ್ಥ? —2 ತಿಮೊಥೆಯ 3:16.

“ದೇವರಿಂದ ಪ್ರೇರಿತ”—ಏನಿದರ ಅರ್ಥ?

ಬೈಬಲಲ್ಲಿ ಒಟ್ಟು 66 ಚಿಕ್ಕ ಪುಸ್ತಕಗಳಿವೆ. ಇದನ್ನು 40 ಜನ ಸುಮಾರು 1,600 ವರ್ಷಗಳ ಅವಧಿಯಲ್ಲಿ ಬರೆದಿದ್ದಾರೆ. ಬೈಬಲನ್ನು ಬರೆದದ್ದು ಮನುಷ್ಯರು ಅಂದಮೇಲೆ, ದೇವರಿಂದ ಪ್ರೇರಿತ ಅನ್ನುವುದರ ಅರ್ಥವೇನು? ದೇವರಿಂದ ಪ್ರೇರಿತ ಅಂದರೆ ಬೈಬಲಿನಲ್ಲಿರುವ ವಿಷಯದ ಮೂಲವು ದೇವರಾಗಿದ್ದಾನೆ ಎಂದರ್ಥ. ಆದ್ದರಿಂದಲೇ “ಮನುಷ್ಯರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತಾಡಿದರು” ಎಂದು ಬೈಬಲ್‌ ಹೇಳುತ್ತದೆ. (2 ಪೇತ್ರ 1:21) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ದೇವರು ತನ್ನ ಸಂದೇಶವನ್ನು ಬೈಬಲ್‌ ಬರಹಗಾರರಿಗೆ ಪವಿತ್ರಾತ್ಮ ಶಕ್ತಿಯ ಮೂಲಕ ತಿಳಿಸಿದನು. ಒಬ್ಬ ಯಜಮಾನ ಒಂದು ಪತ್ರ ಬರೆಯಲು ತನ್ನ ಕೆಲಸಗಾರನಿಗೆ ಹೇಳುವಾಗ ಅದರಲ್ಲಿ ಏನೆಲ್ಲಾ ಇರಬೇಕೆಂದು ಹೇಳುತ್ತಾನೆ. ಅದೇ ರೀತಿ ದೇವರು ಬೈಬಲ್‌ ಎಂಬ ಪತ್ರದಲ್ಲಿ ಏನೆಲ್ಲಾ ಇರಬೇಕೆಂದು ಈ ಮನುಷ್ಯರಿಗೆ ಹೇಳಿದನು. ಪತ್ರ ಬರೆದ ತಕ್ಷಣ ಆ ಪತ್ರ ಬರೆದವರದ್ದಾಗಲ್ಲ, ಯಾರು ಬರೆಸಿದರೋ ಅವರದ್ದೇ ಆಗಿರುತ್ತದೆ.

ಕೆಲವು ಬರಹಗಾರರಿಗೆ ದೇವರು ತನ್ನ ಸಂದೇಶವನ್ನು ದೇವದೂತರ ಮೂಲಕ ತಿಳಿಸಿದನು. ಇನ್ನು ಕೆಲವರಿಗೆ ದರ್ಶನಗಳನ್ನು ತೋರಿಸಿದನು. ಬೇರೆ ಕೆಲವರಿಗೆ ಕನಸಿನಲ್ಲಿ ದೇವರು ತನ್ನ ಸಂದೇಶವನ್ನು ಹೇಳಿದನು. ಆದರೆ, ಕೆಲವೊಮ್ಮೆ ಬರಹಗಾರರು ತಮ್ಮ ಸ್ವಂತ ಮಾತಿನಲ್ಲಿ ಬರೆಯಲು ದೇವರು ಅನುಮತಿಸಿದನು. ಇನ್ನು ಕೆಲವೊಮ್ಮೆ ನಿರ್ದಿಷ್ಟವಾಗಿ ಏನು ಬರೆಯಬೇಕೆಂದು ದೇವರೇ ಹೇಳಿದನು. ಅವರಿಗೆ ವಿಷಯ ಹೇಗೇ ಸಿಕ್ಕಿರಲಿ ಅವರಂತೂ ದೇವರ ಆಲೋಚನೆಗಳನ್ನೇ ಬರೆದರು, ಸ್ವಂತ ಯೋಚನೆಗಳನ್ನಲ್ಲ.

ಬೈಬಲನ್ನು ಬರೆಯಲು ಬರಹಗಾರರನ್ನು ಪ್ರೇರಿಸಿದ್ದು ದೇವರೇ ಎಂದು ಹೇಗೆ ನಂಬಬಹುದು? ಇದನ್ನು ನಂಬಲು 3 ಆಧಾರಗಳನ್ನು ನೋಡೋಣ, ಬನ್ನಿ.