ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನರು ಯಾವುದೇ ವಯಸ್ಸು, ದೇಶ, ಜಾತಿಯವರಾಗಿದ್ರೂ ಭೇದಭಾವ ಮಾಡದೆ ಸಹಾಯ ಮಾಡೋಕೆ ನಿಮ್ಮಿಂದ ಆಗುತ್ತಾ?

ಆಶೀರ್ವಾದ ಪಡೆಯಲು ಬೇರೆಯವರಿಗೆ ಸಹಾಯ ಮಾಡಿ

ಆಶೀರ್ವಾದ ಪಡೆಯಲು ಬೇರೆಯವರಿಗೆ ಸಹಾಯ ಮಾಡಿ

ಲೋಕದಲ್ಲಿರೋ ಎಷ್ಟೋ ಜನರಿಗೆ ತಿನ್ನೋಕೆ ಆಹಾರ ಆಗಲಿ ಇರೋಕೆ ಮನೆ ಆಗಲಿ ಇಲ್ಲ. ಕೆಲವರಂತೂ ಜೀವಿಸೋ ಆಸೆನೇ ಕಳಕೊಂಡಿದ್ದಾರೆ. ಇಂಥವರಿಗೆ ಸಹಾಯ ಮಾಡೋಕೆ ನಾವು ಪ್ರಯತ್ನ ಹಾಕಿದ್ರೆ ದೇವರು ನಮ್ಮನ್ನ ಖಂಡಿತ ಆಶೀರ್ವದಿಸುತ್ತಾನೆ.

ಪವಿತ್ರ ಗ್ರಂಥ ಏನು ಹೇಳುತ್ತೆ?

“ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು.”—ಜ್ಞಾನೋಕ್ತಿ 19:17.

ಬೇರೆಯವರಿಗೆ ಸಹಾಯ ಮಾಡೋದು ಹೇಗೆ?

ಯೇಸು ಒಮ್ಮೆ ಒಬ್ಬ ವ್ಯಕ್ತಿ ಬಗ್ಗೆ ಕಥೆ ಹೇಳಿದ. ಆ ವ್ಯಕ್ತಿನಾ ಕಳ್ಳರು ಚೆನ್ನಾಗಿ ಹೊಡೆದು ದಾರಿಯಲ್ಲೇ ಸಾಯಲಿ ಅಂತ ಬಿಟ್ಟು ಹೋಗಿದ್ದರು. (ಲೂಕ 10:29-37) ಆದ್ರೆ ಅವನಿಗೆ ಸಹಾಯ ಮಾಡಿದ್ದು ಯಾರು ಗೊತ್ತಾ? ಬೇರೆ ಜಾತಿಯ ಒಬ್ಬ ಅಪರಿಚಿತ ವ್ಯಕ್ತಿ. ತನ್ನ ಜನರಿಗೆ ಆ ಗಾಯಗೊಂಡ ವ್ಯಕ್ತಿಯ ಜಾತಿಯವರನ್ನ ಕಂಡ್ರೆ ಆಗದಿದ್ದರೂ ಭೇದಭಾವ ಮಾಡದೆ ಸಹಾಯ ಮಾಡಿದ.

ಆ ಅಪರಿಚಿತ ವ್ಯಕ್ತಿ ಗಾಯಗೊಂಡ ವ್ಯಕ್ತಿಗೆ ಔಷಧಿ ಹಚ್ಚಿದ. ಅಷ್ಟೇ ಅಲ್ಲ, ಆ ರಾತ್ರಿ ವಿಶ್ರಾಂತಿ ತಗೊಳ್ಳೋಕೆ ಬೇಕಾದ ವ್ಯವಸ್ಥೆನೂ ಮಾಡಿಕೊಟ್ಟ. ಹೀಗೆ ಅವನಿಗೆ ಬೇಕಾದ ಸಹಾಯ ಮಾಡಿದ.

ಈ ಕಥೆಯಿಂದ ನಾವೇನು ಕಲಿಬಹುದು? ಬೇರೆಯವರಿಗೆ ಸಹಾಯದ ಅಗತ್ಯ ಇದ್ದಾಗ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಅಂತ ಯೇಸು ಕಲಿಸಿದ. (ಜ್ಞಾನೋಕ್ತಿ 3:27) ಈ ಬಡತನ, ಕಷ್ಟಗಳಿಗೆ ದೇವರು ಬಲುಬೇಗನೆ ಕಡಿವಾಣ ಹಾಕಲಿದ್ದಾನೆ ಅಂತ ಪವಿತ್ರ ಗ್ರಂಥ ತಿಳಿಸುತ್ತೆ. ಇದನ್ನೆಲ್ಲಾ ದೇವರು ಯಾವಾಗ ಮತ್ತು ಹೇಗೆ ಮಾಡುತ್ತಾನೆ ಅನ್ನೋ ಪ್ರಶ್ನೆ ನಮಗೆ ಬರಬಹುದು? ಇದಕ್ಕೆ ಉತ್ರ ಮುಂದಿನ ಲೇಖನದಲ್ಲಿ ಇದೆ.