ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ಪತ್ರಿಕೆಯು ಗರ್ಭದಲ್ಲಿರುವ ಮಗುವಿನ ಜೀವ ಉಳಿಸಿತು

ಎಚ್ಚರ! ಪತ್ರಿಕೆಯು ಗರ್ಭದಲ್ಲಿರುವ ಮಗುವಿನ ಜೀವ ಉಳಿಸಿತು

ಎಚ್ಚರ! ಪತ್ರಿಕೆಯು ಗರ್ಭದಲ್ಲಿರುವ ಮಗುವಿನ ಜೀವ ಉಳಿಸಿತು

● ಮೆಕ್ಸಿಕೋ ದೇಶದ ಅನೀಟಾಳಿಗೆ ಮೂರು ಮಂದಿ ಮಕ್ಕಳಿದ್ದರು. ಆಕೆ ಪುನಃ ಗರ್ಭಿಣಿಯಾದಳು.* ಆದರೆ ತನಗೆ ಈ ಮಗು ಬೇಡವೆಂದೂ ಅದನ್ನು ಹೇಗಾದರೂ ಮಾಡಿ ತೆಗಿಸುತ್ತೇನೆಂದೂ ಗಂಡನಿಗೆ ಹೇಳಿದಳು. ಆತ್ಮಹತ್ಯೆಯ ಬೆದರಿಕೆಯನ್ನೂ ಹಾಕಿದಳು! ಆ ಸಮಯದಲ್ಲಿ ಆಕೆಯೊಂದಿಗೆ ಯೆಹೋವನ ಸಾಕ್ಷಿಗಳು ಬೈಬಲ್‌ ಅಧ್ಯಯನ ಮಾಡುತ್ತಿದ್ದರು. ಆದರೆ ಆಕೆ ಹೆಚ್ಚೇನೂ ಪ್ರಗತಿ ಮಾಡುತ್ತಿರಲಿಲ್ಲ. ಏಕೆಂದರೆ “ನನಗೆ ಸ್ವಲ್ಪ ಅಹಂಕಾರವಿತ್ತು” ಎನ್ನುತ್ತಾಳೆ ಆಕೆ.

ಅನೀಟಾಳಿಗೆ ಬೈಬಲನ್ನು ಕಲಿಸುತ್ತಿದ್ದ ಸಾಕ್ಷಿಯು ಗರ್ಭಪಾತದ ವಿಷಯದಲ್ಲಿ ಬೈಬಲಿನ ಮೂಲತತ್ತ್ವಗಳನ್ನು ವಿವರಿಸಿದಳು. ಉದಾಹರಣೆಗೆ, ಗರ್ಭದಲ್ಲಿರುವ ಮಗುವಿನ ಜೀವ ದೇವರ ದೃಷ್ಟಿಯಲ್ಲಿ ಪವಿತ್ರವೆಂದು ಅವಳು ಬೈಬಲಿನಿಂದ ಅನೀಟಾಳಿಗೆ ತೋರಿಸಿದಳು. ಪ್ರಾಚೀನ ಇಸ್ರಾಯೇಲಿನಲ್ಲಿ ಗರ್ಭಿಣಿ ಸ್ತ್ರೀಯೊಬ್ಬಳಿಗೆ ಯಾರಾದರೂ ಹಾನಿಮಾಡಿ, ಆಕೆಯಾಗಲಿ ಆಕೆಯ ಹೊಟ್ಟೆಯಲ್ಲಿರುವ ಮಗುವಾಗಲಿ ಸಾವನ್ನಪ್ಪುವಲ್ಲಿ, ಇದಕ್ಕೆ ಕಾರಣನಾದ ವ್ಯಕ್ತಿಯನ್ನು ಕೊಲೆಗಾರನೆಂದು ನಿರ್ಣಯಿಸಿ ದಂಡಿಸಬೇಕೆಂಬ ದೇವರ ನಿಯಮವಿತ್ತೆಂದು ಬೈಬಲಿನಿಂದ ತೋರಿಸಿದಳು. (ವಿಮೋಚನಕಾಂಡ 21:22, 23)# ಆದರೆ ಅನೀಟಾ ಇದಾವುದನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಆಕೆ ಮಗುವನ್ನು ತೆಗಿಸಲು ಈಗಾಗಲೇ ಮನಸ್ಸು ಮಾಡಿ ಆಗಿತ್ತು.

ಅನೀಟಾ ಹೇಳುವುದು: “ಗರ್ಭಪಾತವಾಗಲು ದೇಹಕ್ಕೆ ಚುಚ್ಚಿಸಿಕೊಳ್ಳುವ ಒಂದು ಔಷಧ ಇದೆಯೆಂದು ಯಾರೋ ನನಗಂದರು. ಆದ್ದರಿಂದ ನಾನು ಆ ಔಷಧ ಖರೀದಿಸಿ, ಸ್ನೇಹಿತನೊಬ್ಬನಿಗೆ ನನಗದನ್ನು ಚುಚ್ಚಲು ಹೇಳಿದೆ. ಅವನು ಚುಚ್ಚಿದ, ಆದರೆ ಏನೂ ಆಗಲಿಲ್ಲ. ಅವನಿಗೆ ಈ ಅಪರಾಧದಲ್ಲಿ ಶಾಮೀಲಾಗಲು ಇಷ್ಟವಿರಲಿಲ್ಲವೆಂದೂ ಆದ್ದರಿಂದ ನನಗೆ ತಿಳಿಯದ ಹಾಗೆ ಔಷಧದ ಬದಲಿಗೆ ಶುದ್ಧ ನೀರನ್ನು ತುಂಬಿಸಿದ್ದನೆಂದೂ ನನಗೆ ಆಮೇಲೆ ಗೊತ್ತಾಯಿತು.”

ಆದರೂ ಅನೀಟಾ ತನ್ನ ಹಠ ಬಿಡಲಿಲ್ಲ. ನಾಲ್ಕನೇ ತಿಂಗಳಲ್ಲಿ ಆಕೆಗೆ ಗರ್ಭಪಾತ ಮಾಡಲು ಡಾಕ್ಟರರೊಬ್ಬರು ಒಪ್ಪಿಕೊಂಡರು. ಅದನ್ನು ಮಾಡಲಿಕ್ಕೆ ಆರು ದಿನಗಳಿದ್ದಾಗ, ಅನೀಟಾಳೊಂದಿಗೆ ಬೈಬಲ್‌ ಅಧ್ಯಯನ ನಡೆಸುತ್ತಿದ್ದ ಸಾಕ್ಷಿ, “ಗರ್ಭದಲ್ಲಿರುವ ಮಗುವಿನ ಡೈರಿ” ಎಂಬ ಲೇಖನದ ಪ್ರತಿಯನ್ನು ಆಕೆಯ ಕೈಗಿತ್ತಳು. ಈ ಲೇಖನವನ್ನು ಎಚ್ಚರ! ಪತ್ರಿಕೆಯ 1980ರ ಮೇ 22ರ (ಇಂಗ್ಲಿಷ್‌) ಸಂಚಿಕೆಯಲ್ಲಿ ಪ್ರಕಾಶಿಸಲಾಗಿತ್ತು. ಆ “ಡೈರಿ”ಯಲ್ಲಿನ ಕೊನೆ ಮಾತುಗಳು ಹೀಗಿದ್ದವು: “ಇವತ್ತು ಅಮ್ಮ ನನ್ನನ್ನು ಕೊಂದುಬಿಟ್ಟರು.” ಇದನ್ನು ಓದಿ ಅನೀಟಾಳಿಗೆ ಹೃದಯಕ್ಕೆ ಇರಿದಂತಾಯಿತು. ಹಲವಾರು ತಾಸುಗಳ ತನಕ ಅಳುತ್ತಾ ಇದ್ದಳು. “ಆ ಲೇಖನ ನನ್ನ ಕಣ್ಣು ತೆರೆಸಿತು” ಎನ್ನುತ್ತಾಳೆ ಈಗವಳು.

ಅನೀಟಾ ಒಂದು ಆರೋಗ್ಯವಂತ ಹೆಣ್ಣುಮಗುವಿಗೆ ಜನ್ಮವಿತ್ತಳು. ಆಕೆ ಅನ್ನುವುದು: “ನನಗಿಂದು ಯೆಹೋವನ ಬಗ್ಗೆ ತಿಳಿಯುವ ಸದವಕಾಶ ಇದೆ. ಆತನನ್ನು ಮನಃಪೂರ್ವಕವಾಗಿ ಪ್ರೀತಿಸುತ್ತೇನೆ.” ಅಲ್ಲದೆ ಆಕೆ ತನ್ನ ಮಗಳಿಗೂ ದೇವರ ವಾಕ್ಯವನ್ನು ಕಲಿಸುತ್ತಾ, ಅವಳೂ ಯೆಹೋವನಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುತ್ತಿದ್ದಾಳೆ. ಆಕೆಯ ಮಗಳು ತನ್ನ ಜೀವಕ್ಕಾಗಿ ತಾನು ದೇವರಿಗೇ ಋಣಿಯೆಂದು ಒಪ್ಪಿಕೊಳ್ಳುತ್ತಾಳೆ. ಇದಕ್ಕೆ ಮೊದಲನೇ ಕಾರಣ ಆತನು ಜೀವದ ಮೂಲನು. ಎರಡನೇ ಕಾರಣ ತನ್ನ ಜೀವವನ್ನು ಉಳಿಸಿದ ಎಚ್ಚರ! ಪತ್ರಿಕೆಯಲ್ಲಿ ಚರ್ಚಿಸಲಾಗಿದ್ದ ಆತನ ವಾಕ್ಯದ ಬೋಧನೆಗಳೇ. (g10-E 02)

[ಪಾದಟಿಪ್ಪಣಿ]

ಹೆಸರನ್ನು ಬದಲಾಯಿಸಲಾಗಿದೆ.

ಮೂಲ ಭಾಷೆಯಲ್ಲಿರುವ ಪದಪ್ರಯೋಗವು ತಾಯಿ ಇಲ್ಲವೆ ಮಗುವಿನ ಸಾವಿಗೆ ಸೂಚಿಸುತ್ತದೆ.