ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧನ್ಯವಾದ ಹೇಳಲು ಮರೆಯಬೇಡಿ!

ಧನ್ಯವಾದ ಹೇಳಲು ಮರೆಯಬೇಡಿ!

ಧನ್ಯವಾದ ಹೇಳಲು ಮರೆಯಬೇಡಿ!

ನಿಮಗೆ ಥ್ಯಾಂಕ್ಯು ಕಾರ್ಡ್‌ ಸಿಕ್ಕಿ ಎಷ್ಟು ಸಮಯ ಆಯಿತು? ಅಥವಾ ನೀವು ಥ್ಯಾಂಕ್ಯು ಕಾರ್ಡ್‌ ಕೊಟ್ಟು ಎಷ್ಟು ಸಮಯ ಆಯಿತು?

ಇದು ಕಂಪ್ಯೂಟರ್‌ ಯುಗ. ಒಂದು ಪತ್ರವನ್ನೋ ಕಾರ್ಡನ್ನೋ ಕೈಯಾರೆ ಬರೆದು ಧನ್ಯವಾದ ತಿಳಿಸುವ ಕಾಲ ಕಣ್ಮರೆಯಾಗಿದೆ. ಆದರೂ ನಿಮ್ಮ ಕೈಯಿಂದಲೇ ಒಂದು ಚಿಕ್ಕ ಪತ್ರ ಬರೆದು ಉಪಕಾರ ಸ್ಮರಿಸಿದರೆ, ಅದು “ಧನ್ಯವಾದ” ತಿಳಿಸುವ ಅತ್ಯುತ್ತಮ ಪರಿ ಎಂದೇ ಹೇಳಬಹುದು. ಸರಿ, ಈಗ ಒಂದು ಕಾರ್ಡ್‌ ಬರೆಯುವುದು ಹೇಗೆಂದು ನೋಡೋಣ.

1. ಕಾರ್ಡನ್ನು ಟೈಪ್‌ ಮಾಡಬೇಡಿ. ಕೈಯಿಂದ ಬರೆಯಿರಿ ಆಗ ಅದರಲ್ಲಿ ಆತ್ಮೀಯಭಾವ ತುಂಬಿರುತ್ತೆ.

2. ಯಾರಿಗೋಸ್ಕರ ಕಾರ್ಡ್‌ ಸಿದ್ಧಮಾಡುತ್ತಿದ್ದಿರೋ ಅವರ ಹೆಸರನ್ನು ಉಲ್ಲೇಖಿಸಿ.

3. ಉಡುಗೊರೆ ಸಿಕ್ಕಿದರೆ, ಉಡುಗೊರೆಯ ವಿಷ್ಯವನ್ನು ಪ್ರಸ್ತಾಪಿಸಿ. ಅದನ್ನು ಹೇಗೆ ಬಳಸಲಿದ್ದೀರೆಂದು ಕಾರ್ಡಲ್ಲಿ ಬರೆಯಿರಿ.

4. ಪತ್ರದ ಕೊನೆಯಲ್ಲಿ ಮತ್ತೊಮ್ಮೆ ಧನ್ಯವಾದ ಹೇಳಲು ಮರೆಯಬೇಡಿ.

ಒಬ್ಬರ ಸಹಾಯಕ್ಕೆ ಪ್ರತಿಯಾಗಿ ನೀವವರಿಗೆ ಕೊಡುವ ಥ್ಯಾಂಕ್ಯು ಕಾರ್ಡ್‌ ಬೀರುವ ಪರಿಣಾಮ, ತುಂಬುವ ಉಲ್ಲಾಸ ಅಪಾರ.

ಹಾಗಾಗಿ ಯಾರಾದರೂ ನಿಮಗೆ ಅತಿಥಿಸತ್ಕಾರ ಮಾಡಿದರೆ, ಸಹಾಯ ಮಾಡಿದರೆ, ಉಡುಗೊರೆ ಕೊಟ್ಟರೆ ಅವರ ಸುಗುಣಕ್ಕೆ ಬೆಲೆಯಿದೆ ಎನ್ನುವುದನ್ನು ತೋರಿಸಿ. ಧನ್ಯವಾದ ಹೇಳಲು ಮರೆಯಬೇಡಿ! (g12-E 07)

[ಪುಟ 28, 29ರಲ್ಲಿರುವ ಚೌಕ/ಚಿತ್ರಗಳು]

ನನ್ನ ಪ್ರೀತಿಯ ಮೇರಿ ಚಿಕ್ಕಮ್ಮ, #2

ಅಲಾರ್ಮ್‌ ಗಡಿಯಾರ ಕೊಟ್ಟದ್ದಕ್ಕೆ ತುಂಬ ಧನ್ಯವಾದ ಚಿಕ್ಕಮ್ಮ#3. ನಿಮಗೇ ಗೊತ್ತಿದೆ ನಂಗೆ ನಿದ್ದೆ ಜಾಸ್ತಿ ಅಂತ. ಈ ಗಡಿಯಾರದಿಂದ ತುಂಬ ಉಪಯೋಗ ಆಗ್ತಿದೆ. ದಿನಾ ಬೆಳಗ್ಗೆ ಅದೇ ನನ್ನನ್ನು ಎಬ್ಬಿಸೋದು. ಕಳೆದ ವಾರ ನಿಮ್ಮನ್ನು ನೋಡಿದಾಗ ಸಿಕ್ಕಾಪಟ್ಟೆ ಖುಷಿ ಆಯ್ತು. ನೀವು ಸುರಕ್ಷಿತವಾಗಿ ಮನೆ ತಲಪಿದಿರಿ ಅಂತ ಭಾವಿಸ್ತೇನೆ ಮುಂದಿನ ತಿಂಗಳು ಮನೆಗೆ ಬರೋಣ ಅಂತ ಇದ್ದೇನೆ. ಬಂದಾಗ ನಿಮ್ಮನ್ನು ಕಂಡು ಮಾತಾಡ್ತೇನೆ.

ನೀವು ಅಕ್ಕರೆಯಿಂದ ಕೊಟ್ಟಿರೋ ಉಡುಗೊರೆಗೆ ಮತ್ತೊಮ್ಮೆ ಧನ್ಯವಾದ. #4

ನಿಮ್ಮ ಪ್ರೀತಿಯ ಮಗ,

ಜಾನ್‌

[ಚಿತ್ರ]

#1

[ಪುಟ 29ರಲ್ಲಿರುವ ಚೌಕ]

ಕಿವಿಮಾತುಗಳು

● ನಿಮಗೆ ಹಣದ ರೂಪದಲ್ಲಿ ಯಾವುದಾದರೂ ಉಡುಗೊರೆ ಸಿಕ್ಕಿದರೆ ಕಾರ್ಡಲ್ಲಿ ಅದನ್ನು ಪರೋಕ್ಷವಾಗಿ ಉಲ್ಲೇಖಿಸಿ. ಉದಾ: ಎಷ್ಟು ಮೊತ್ತ ಎಂದೆಲ್ಲ ಹೇಳದೆ “ಉದಾರತೆಯಿಂದ ನೀವು ನೀಡಿರೋ ಹಣಕ್ಕೆ ತುಂಬ ಧನ್ಯವಾದ. ನಾನಿದನ್ನು ಯಾವುದಕ್ಕೆ ಬಳಸ್ತೀನಿ ಅಂದ್ರೆ . . .” ಎಂದು ಹೇಳಿ.

● ಉಡುಗೊರೆಗೆ ಸಂಬಂಧಪಟ್ಟ ವಿಷ್ಯಗಳನ್ನು ಮಾತ್ರ ಪತ್ರದಲ್ಲಿ ಸೇರಿಸಿ. ಕೃತಜ್ಞತೆ ಹೇಳಿ. ನಿಮ್ಮ ರಜಾದಿನಗಳ ಮಜಾವನ್ನೋ ಆಸ್ಪತ್ರೆಗೆ ಹೋಗಿ ಬಂದ ಕಥೆಯನ್ನೋ ವಿವರಿಸಬೇಡಿ.

● ಉಡುಗೊರೆಯ ಬಗ್ಗೆ ಹಾಗಿತ್ತು ಹೀಗಿತ್ತು ಎಂದು ಒಂದೂ ಪದವನ್ನು ಪತ್ರದಲ್ಲಿ ಸೇರಿಸಬೇಡಿ. ಉದಾ: “ಶರ್ಟ್‌ ಕೊಟ್ಟಿದಕ್ಕೆ ಧನ್ಯವಾದ. ಆದರೆ, ನನಗದು ತುಂಬ ದೊಡ್ಡದಾಯ್ತು” ಅಂತ ಹೇಳಿದರೆ ಮೂರ್ಖತನವಾದೀತು!

[ಪುಟ 29ರಲ್ಲಿರುವ ಚೌಕ]

ನಮ್ಮ ಮನದಲ್ಲಿ ಯಾವಾಗಲೂ ಕೃತಜ್ಞತಾಭಾವ ತುಂಬಿರಬೇಕೆನ್ನುತ್ತದೆ ಬೈಬಲ್‌. (ಲೂಕ 17:11-19) ದೇವರಿಗೆ “ಎಡೆಬಿಡದೆ ಪ್ರಾರ್ಥನೆಮಾಡಿರಿ. ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ” ಎಂದೂ ಪ್ರೋತ್ಸಾಹಿಸುತ್ತೆ.—1 ಥೆಸಲೊನೀಕ 5:17, 18.