ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಶ್ವ-ವೀಕ್ಷಣೆ

ವಿಶ್ವ-ವೀಕ್ಷಣೆ

ಇಟಲಿ

ಇಟಲಿಯಲ್ಲಿ 2011ರಲ್ಲಿ ಕಾರಿಗಿಂತ ಸೈಕಲ್‌ಗಳು ಹೆಚ್ಚು ಮಾರಾಟವಾದವು. ಇದಕ್ಕೆ ಕೆಲವು ಕಾರಣಗಳು ಆರ್ಥಿಕ ಹಿನ್ನಡೆ, ಏರುತ್ತಿರುವ ಇಂಧನದ ಬೆಲೆ ಮತ್ತು ಕಾರಿನ ನಿರ್ವಹಣಾ ವೆಚ್ಚ. ಕಾರಿಗೆ ಹೋಲಿಸಿದರೆ ಸೈಕಲಿಗಾಗುವ ಖರ್ಚು ಕಮ್ಮಿ, ಬಳಕೆ ಸುಲಭ, ಹೆಚ್ಚು ಅನುಕೂಲ.

ಅರ್ಮೇನಿಯ

ಮಿಲಿಟರಿಯ ಮೇಲ್ವಿಚಾರಣೆಯಡಿ ನಾಗರೀಕ ಸೇವೆಮಾಡಲು ಒಪ್ಪದಿದ್ದ 17 ಮಂದಿ ಯೆಹೋವನ ಸಾಕ್ಷಿಗಳನ್ನು ಅರ್ಮೇನಿಯ ಸರ್ಕಾರ ಬಂಧನದಲ್ಲಿಟ್ಟಿತ್ತು. ಇದನ್ನು ಮಾನವ ಹಕ್ಕುಗಳ ಯೂರೋಪಿಯನ್‌ ಕೋರ್ಟ್ ಖಂಡಿಸಿತು. ಅಲ್ಲದೆ ಅವರಿಗಾದ ನಷ್ಟವನ್ನು ಮರುಪಾವತಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತು.

ಜಪಾನ್‌

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳು ಪಾತಕಿಗಳಿಗೆ ಬಲಿಪಶು ಆಗುತ್ತಿದ್ದಾರೆ. ಅಂಥ ಸುಮಾರು 63% ಮಕ್ಕಳಿಗೆ ಇಂಥ ಅಪಾಯಗಳ ಬಗ್ಗೆ ಹೆತ್ತವರು ಎಚ್ಚರಿಕೆ ನೀಡಿಲ್ಲ. ಪರಿಶೀಲನೆ ನಡೆಸಿದ 599 ಪ್ರಕರಣಗಳಲ್ಲಿ 74% ಆರೋಪಿಗಳು ಅಪ್ರಾಪ್ತ ಮಕ್ಕಳೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಈ ಜಾಲತಾಣಗಳನ್ನು ಬಳಸಿದ್ದಾಗಿ ಒಪ್ಪಿಕೊಂಡರು.

ಚೀನಾ

ಟ್ರ್ಯಾಫಿಕ್‌ ಜ್ಯಾಮ್‌ ಕಮ್ಮಿ ಮಾಡಲು ಮಹಾನಗರಿಗಳಲ್ಲಿ ಹೊಸ ವಾಹನ ನೋಂದಣಿಗೇ ಕತ್ತರಿ ಹಾಕಲಾಗಿದೆ. ಉದಾ: ಬೀಜಿಂಗ್‌ ನಗರದಲ್ಲಿ ವರ್ಷಕ್ಕೆ 2,40,000 ನೋಂದಣಿಗಳನ್ನು ಮಾತ್ರ ಮಾಡಲಾಗುತ್ತಿದೆ. ಆಗಸ್ಟ್‌ 2012ರಲ್ಲಿ ಸುಮಾರು 10,50,000 ಜನರು ಅರ್ಜಿ ಹಾಕಿದ್ದರು. ಲಾಟರಿ ಎತ್ತಿ ಅವರಲ್ಲಿ 19,926 ಜನರಿಗೆ ಮಾತ್ರ ಕೊಡಲಾಯಿತು. ಅಂದರೆ 53ರಲ್ಲಿ ಒಂದು ಅರ್ಜಿ ಸ್ವೀಕರಿಸಿದಂತೆ. (g13-E 10)