ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:

ಯೇಸುವಿಗೆ ತಮ್ಮಂದಿರು ಮತ್ತು ತಂಗಿಯರಿದ್ದರೆಂದು ಯಾವುದು ಸೂಚಿಸುತ್ತದೆ?

ಬೈಬಲ್‌ ಇದನ್ನು ಮತ್ತಾಯ 13:​55, 56 ಮತ್ತು ಮಾರ್ಕ 6:3ರಲ್ಲಿ ತಿಳಿಸುತ್ತದೆ. ಅಲ್ಲಿ ಕಂಡುಬರುವ ಗ್ರೀಕ್‌ ಪದವು (ಆಡೆಲ್ಫೊಸ್‌) “ಒಂದು ರೀತಿಯ ಶಾರೀರಿಕ ಅಥವಾ ಕಾನೂನುಬದ್ಧ ಸಂಬಂಧವನ್ನು” ಸೂಚಿಸಲಿಕ್ಕಾಗಿ ಉಪಯೋಗಿಸಲ್ಪಡುತ್ತದೆ ಮತ್ತು “ಸ್ವಂತ ಅಥವಾ ಮಲಸಹೋದರನನ್ನು ಅರ್ಥೈಸುತ್ತದೆ.” (ದ ಕ್ಯಾಥೊಲಿಕ್‌ ಬಿಬ್ಲಿಕಲ್‌ ಕ್ವಾರ್ಟರ್ಲಿ, ಜನವರಿ 1992)​—⁠12/15, ಪುಟ 3.

ಯುದ್ಧದ ಯಾವ ಹೊಸ ರೂಪವು ಸ್ಪಷ್ಟವಾಗಿ ತೋರಿಬರುತ್ತಿದೆ, ಮತ್ತು ಅನೇಕವೇಳೆ ಮೂಲ ಕಾರಣಗಳು ಯಾವುವು?

ಇತ್ತೀಚಿನ ವರ್ಷಗಳಲ್ಲಿ ಮಾನವಕುಲವನ್ನು ಪೀಡಿಸಿರುವ ಯುದ್ಧಗಳು ಮುಖ್ಯವಾಗಿ ಆಂತರಿಕ ಯುದ್ಧಗಳಾಗಿವೆ, ಅಂದರೆ ಒಂದೇ ದೇಶದ ಪ್ರಜೆಗಳಲ್ಲಿರುವ ವಿರುದ್ಧಪಕ್ಷಗಳ ಮಧ್ಯೆ ನಡೆಯುವ ಯುದ್ಧಗಳು. ಕುಲಸಂಬಂಧಿತ ಮತ್ತು ಜಾತೀಯ ದ್ವೇಷ, ಧಾರ್ಮಿಕ ಭಿನ್ನತೆಗಳು, ಅನ್ಯಾಯ, ಮತ್ತು ರಾಜಕೀಯ ಅಶಾಂತಿಯು ಇದಕ್ಕೆ ಕಾರಣಗಳಾಗಿವೆ. ಮತ್ತೊಂದು ಮೂಲ ಕಾರಣ, ಪದವಿಗಾಗಿ ಮತ್ತು ಹಣಕ್ಕಾಗಿ ದುರಾಶೆಯಾಗಿರುತ್ತದೆ.​—⁠1/1, ಪುಟಗಳು 3-4.

ಕ್ರೈಸ್ತರು ಮಾದರಿ ಪ್ರಾರ್ಥನೆಯ ಪದಗಳನ್ನು ಕಂಠಪಾಠ ಮಾಡಿ ಪುನರುಚ್ಚರಿಸುವುದು ಯೇಸುವಿನ ಉದ್ದೇಶವಾಗಿರಲಿಲ್ಲ ಎಂದು ನಮಗೆ ಹೇಗೆ ತಿಳಿದಿದೆ?

ಯೇಸು ಈ ಪ್ರಾರ್ಥನೆಯ ಮಾದರಿಯನ್ನು ಪರ್ವತಪ್ರಸಂಗದಲ್ಲಿ ಕೊಟ್ಟನು. ಸುಮಾರು 18 ತಿಂಗಳುಗಳ ನಂತರ ಅವನು, ಪ್ರಾರ್ಥನೆಯ ಬಗ್ಗೆ ಈ ಹಿಂದೆ ಕೊಟ್ಟಿದ್ದಂಥ ಸೂಚನೆಗಳ ಪ್ರಾಮುಖ್ಯ ಅಂಶಗಳನ್ನು ಪುನಃ ಹೇಳಿದನು. (ಮತ್ತಾಯ 6:​9-13; ಲೂಕ 11:​1-4) ಗಮನಿಸಬೇಕಾದ ವಾಸ್ತವಾಂಶವೇನೆಂದರೆ, ಜನರು ಕಂಠಪಾಠ ಮಾಡಿಕೊಳ್ಳಬೇಕಾದ ಒಂದು ಆರಾಧನಾ ವಿಧಾನದ ಪ್ರಾರ್ಥನೆಯನ್ನು ತಾನು ಕಲಿಸುತ್ತಿಲ್ಲ ಎಂಬುದನ್ನು ಸೂಚಿಸುತ್ತಾ ಅವನು ಅದೇ ಪದಗಳನ್ನು ಪುನರುಚ್ಚರಿಸಲಿಲ್ಲ.​—⁠2/1, ಪುಟ 8.

ಜಲಪ್ರಳಯಾನಂತರ, ಪಾರಿವಾಳವು ನಾವೆಗೆ ತಂದಂಥ ಚಿಗುರು ಅದಕ್ಕೆ ಎಲ್ಲಿಂದ ಸಿಕ್ಕಿತು?

ಪ್ರಳಯದ ನೀರಿನ ಲವಣತ್ವ ಮತ್ತು ಉಷ್ಣತೆ ಎಷ್ಟಿತ್ತು ಎಂಬುದು ನಮಗೆ ತಿಳಿದಿಲ್ಲ. ಆದರೆ ಕಡಿದುಹಾಕಲ್ಪಟ್ಟ ನಂತರವೂ ಎಣ್ಣೇಮರಗಳು ಪುನಃ ಚಿಗುರುತ್ತವೆ ಎಂಬ ಸಂಗತಿಯು ಜ್ಞಾತ. ಆದುದರಿಂದ ಕೆಲವೊಂದು ಮರಗಳು ಪ್ರಳಯದ ನೀರನ್ನು ಪಾರಾಗಿ, ತದನಂತರ ಎಲೆಗಳನ್ನು ಚಿಗುರಿಸಿರಬಹುದು.​—⁠2/15, ಪುಟ 31.

ನೈಜೀರಿಯದ ಆಂತರಿಕ ಯುದ್ಧದ ಸಮಯದಲ್ಲಿ ಬಿಯಾಫ್ರದಲ್ಲಿದ್ದ ದಿಗ್ಬಂಧನದ ಮಧ್ಯದಲ್ಲೂ, ಆ ಕ್ಷೇತ್ರದಲ್ಲಿದ್ದ ಯೆಹೋವನ ಸಾಕ್ಷಿಗಳು ಹೇಗೆ ಆಧ್ಯಾತ್ಮಿಕ ಆಹಾರವನ್ನು ಪಡೆದರು?

ಒಬ್ಬ ಸರಕಾರೀ ಅಧಿಕಾರಿಯನ್ನು ಯೂರೋಪಿನಲ್ಲಿ ಒಂದು ಹುದ್ದೆಗೂ ಇನ್ನೊಬ್ಬರನ್ನು ಬಿಯಾಫ್ರದ ವಿಮಾನಹಾದಿಯನ್ನು ನೋಡಿಕೊಳ್ಳುವುದಕ್ಕೂ ನೇಮಿಸಲಾಯಿತು. ಇವರಿಬ್ಬರೂ ಸಾಕ್ಷಿಗಳಾಗಿದ್ದರು. ಈ ಇಬ್ಬರು ಸಾಕ್ಷಿಗಳು ಬಿಯಾಫ್ರದೊಳಗೆ ಆಧ್ಯಾತ್ಮಿಕ ಆಹಾರವನ್ನು ಕೊಂಡೊಯ್ಯುವ ಅಪಾಯಕರ ಕೆಲಸವನ್ನು ಮಾಡಲು ತಮ್ಮನ್ನೇ ನೀಡಿಕೊಂಡರು. ಹೀಗೆ 1970ರಲ್ಲಿ ಯುದ್ಧವು ಮುಗಿಯುವ ತನಕ, ಅವರು ಅನೇಕ ಸಹೋದರರಿಗೆ ಪ್ರಯೋಜನಗಳನ್ನು ತಂದರು.​—⁠3/1, ಪುಟ 27.

ವೆಸ್ಟ್‌ಫೇಲಿಯದ ಶಾಂತಿ ಸಂಧಾನದಿಂದ ಏನು ಸಾಧಿಸಲ್ಪಟ್ಟಿತು, ಮತ್ತು ಇದರಲ್ಲಿ ಧರ್ಮವು ಹೇಗೆ ಒಳಗೂಡಿತ್ತು?

ಮತಸುಧಾರಣೆಯು ಪವಿತ್ರ ರೋಮನ್‌ ಸಾಮ್ರಾಜ್ಯವನ್ನು ಮೂರು ರೀತಿಯ ನಂಬಿಕೆಗಳುಳ್ಳದ್ದಾಗಿ ವಿಭಾಗಿಸಿತು​—⁠ಕ್ಯಾಥೊಲಿಕರು, ಲೂತರ್‌ನ ಅನುಯಾಯಿಗಳು, ಮತ್ತು ಕ್ಯಾಲ್ವಿನ್‌ನ ಅನುಯಾಯಿಗಳು. 17ನೆಯ ಶತಮಾನದ ಆರಂಭದಲ್ಲಿ ಪ್ರಾಟೆಸ್ಟೆಂಟ್‌ ಒಕ್ಕೂಟ ಮತ್ತು ಕ್ಯಾಥೊಲಿಕ್‌ ಸಂಘವು ರಚಿಸಲ್ಪಟ್ಟಿತು. ನಂತರ ಬೊಹೀಮೀಯದಲ್ಲಿ ಒಂದು ಧಾರ್ಮಿಕ ಹೋರಾಟವು ಆರಂಭವಾಗಿ, ಅದು ಒಂದು ಅಂತಾರಾಷ್ಟ್ರೀಯ ಅಧಿಕಾರವನ್ನು ಪಡೆಯಲಿಕ್ಕಾಗಿರುವ ಕಾದಾಟವಾಗಿ ಉಲ್ಬಣಗೊಂಡಿತು. ಕ್ಯಾಥೊಲಿಕ್‌ ಮತ್ತು ಪ್ರಾಟೆಸ್ಟೆಂಟ್‌ ರಾಜರು, ರಾಜಕೀಯ ಪರಮಾಧಿಕಾರ ಮತ್ತು ವಾಣಿಜ್ಯ ಲಾಭಕ್ಕಾಗಿ ಮೋಸದಿಂದ ಕಾರ್ಯವೆಸಗಿದರು. ಕೊನೆಗೆ ವೆಸ್ಟ್‌ಫೇಲಿಯದ ಜರ್ಮನ್‌ ಪ್ರಾಂತದಲ್ಲಿ ಶಾಂತಿಯ ಮಾತುಕತೆಗಳು ನಡೆಸಲ್ಪಟ್ಟವು. ಸುಮಾರು ಐದು ವರ್ಷಗಳ ಬಳಿಕ 1648ರಲ್ಲಿ ವೆಸ್ಟ್‌ಫೇಲಿಯದ ಶಾಂತಿ ಸಂಧಾನಕ್ಕೆ ಸಹಿಹಾಕಲಾಯಿತು. ಇದು ಮೂವತ್ತು ವರ್ಷಗಳ ಯುದ್ಧವನ್ನು ಅಂತ್ಯಗೊಳಿಸಿತು ಮತ್ತು ಸರ್ವಸ್ವತಂತ್ರ ರಾಜ್ಯಗಳ ಒಂದು ಭೂಖಂಡದೋಪಾದಿ ಆಧುನಿಕ ಯೂರೋಪಿನ ಉದಯವನ್ನು ಗುರುತಿಸಿತು.​—⁠3/15, ಪುಟಗಳು 20-3.

‘ಕಾಡು ಮೃಗದ’ ಗುರುತು ಅಥವಾ ಹೆಸರಿನ​—⁠666 ಎಂಬ ಅಂಕೆಯ​—⁠ಅರ್ಥವೇನು?

ಈ ಗುರುತು ಪ್ರಕಟನೆ 13:​16-18ರಲ್ಲಿ ತಿಳಿಸಲ್ಪಟ್ಟಿದೆ. ಈ ಮೃಗವು ಮಾನವ ಆಳ್ವಿಕೆಗೆ ಸೂಚಿಸುತ್ತದೆ, ಮತ್ತು ಆ ಮೃಗವು “ಒಂದು ಮಾನವ ಸಂಖ್ಯೆ”ಯನ್ನು ಹೊಂದಿರುವುದು, ಸರಕಾರಗಳು ಪಾಪಭರಿತ ಮಾನವ ಸ್ಥಿತಿಗತಿಯನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ಸೂಚಿಸುತ್ತದೆ. 6+60+600 ಎಂಬುದು, ಅದು ದೇವರ ದೃಷ್ಟಿಯಲ್ಲಿ ಸಂಪೂರ್ಣವಾಗಿ ನ್ಯೂನವುಳ್ಳದ್ದಾಗಿದೆ ಎಂಬದನ್ನು ತೋರಿಸುತ್ತದೆ. ಈ ಗುರುತನ್ನು ಹೊಂದಿರುವವರು ರಾಜಕೀಯ ಸರಕಾರಕ್ಕೆ ಆರಾಧನಾಭರಿತ ಸನ್ಮಾನವನ್ನು ಕೊಡುತ್ತಾರೆ, ಅಥವಾ ರಕ್ಷಣೆಗಾಗಿ ಅದರ ಮೇಲೆ ಆತುಕೊಳ್ಳುತ್ತಾರೆ.​—⁠4/1, ಪುಟಗಳು 4-7.