ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಜೀವನದ ಉದ್ದೇಶವೇನು?”

“ಜೀವನದ ಉದ್ದೇಶವೇನು?”

“ಜೀವನದ ಉದ್ದೇಶವೇನು?”

ಈ ಪ್ರಶ್ನೆಯನ್ನು ನೊಬೆಲ್‌ ಪಾರಿತೋಷಕ ವಿಜೇತರೂ ಯೆಹೂದ್ಯರ ಸಂಹಾರವನ್ನು ಪಾರಾಗಿ ಉಳಿದವರೂ ಆದ ಏಲಿ ವೀಸೆಲ್‌ರು, “ಮನುಷ್ಯನೊಬ್ಬನು ಯೋಚಿಸಬಹುದಾದ ಅತಿ ಪ್ರಾಮುಖ್ಯ ಪ್ರಶ್ನೆ” ಎಂದು ಕರೆದರು.

ಜೀವನದ ಉದ್ದೇಶದ ಕುರಿತು ನೀವು ಎಂದಾದರೂ ಆಲೋಚಿಸಿದ್ದುಂಟೊ? ಅನೇಕರು ಇದರ ಬಗ್ಗೆ ಆಲೋಚಿಸಿದ್ದಾರೆ, ಆದರೆ ಉತ್ತರವನ್ನು ಕಂಡುಕೊಂಡಿಲ್ಲ. ಜೀವನದ ಉದ್ದೇಶವೇನೆಂಬುದನ್ನು ತಿಳಿಸಲು ಯತ್ನಿಸುತ್ತಾ ಇತಿಹಾಸಗಾರರಾದ ಆರ್ನಲ್ಡ್‌ ಟಾಯ್ನ್‌ಬೀ ಬರೆದುದು: “ಮಾನವನ ನಿಜವಾದ ಗುರಿಯು ದೇವರನ್ನು ಮಹಿಮೆಪಡಿಸುವುದು ಮತ್ತು ಆತನಿಂದ ಅನಂತ ಸಂತೋಷವನ್ನು ಪಡೆಯುವುದೇ ಆಗಿದೆ.”

ಆಸಕ್ತಿಕರವಾಗಿ, ಮೂರು ಸಹಸ್ರಮಾನಕ್ಕಿಂತಲೂ ಹಿಂದೆಯೇ, ಜೀವನವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದವನೆಂದು ಪ್ರಸಿದ್ಧನಾದ ಮತ್ತೊಬ್ಬ ವ್ಯಕ್ತಿಯು ಇದರ ಮೂಲಭೂತ ಉತ್ತರವನ್ನು ಕಂಡುಹಿಡಿದಿದ್ದನು. ಈತನು ಜ್ಞಾನಿಯಾದ ಅರಸ ಸೊಲೊಮೋನನಾಗಿದ್ದನು. ಅವನು ಹೇಳಿದ್ದು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”​—⁠ಪ್ರಸಂಗಿ 12:13.

ಈ ಮೂಲತತ್ತ್ವವನ್ನು ದೇವರ ಪುತ್ರನಾದ ಯೇಸು ಕ್ರಿಸ್ತನು ಬೆಂಬಲಿಸಿದನು. ಅವನು ಭೂಮಿಯಲ್ಲಿದ್ದಾಗ, ತನ್ನ ಸ್ವರ್ಗೀಯ ತಂದೆಯನ್ನು ಮಹಿಮೆಪಡಿಸಲು ಪೂರ್ಣ ಪ್ರಯತ್ನವನ್ನು ಮಾಡಿದನು. ತನ್ನ ಸೃಷ್ಟಿಕರ್ತನನ್ನು ಸೇವಿಸುವುದು ಯೇಸುವಿನ ಜೀವನವನ್ನು ಸಂಪನ್ನಗೊಳಿಸಿತು. ಅದು ಅವನನ್ನು ಪೋಷಿಸಿತು. ಆದುದರಿಂದಲೇ ಯೇಸು ಹೀಗೆ ಹೇಳಲು ಶಕ್ತನಾದನು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.”​—ಯೋಹಾನ 4:​34.

ಹಾಗಾದರೆ ಜೀವನದ ಉದ್ದೇಶವೇನು? ಯೇಸು, ಸೊಲೊಮೋನನು ಮತ್ತು ದೇವರ ಇನ್ನಿತರ ಅನೇಕ ಸೇವಕರಂತೆ, ನಾವು ಕೂಡ ದೇವರ ಚಿತ್ತವನ್ನು ಮಾಡುವುದರ ಮೂಲಕ ಜೀವನದ ನಿಜವಾದ ಅರ್ಥ ಮತ್ತು ಅನಂತ ಸಂತೋಷವನ್ನು ಕಂಡುಕೊಳ್ಳಬಲ್ಲೆವು. ದೇವರನ್ನು “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ” ಆರಾಧಿಸುವುದು ಹೇಗೆಂಬುದನ್ನು ತಿಳಿಯಲು ನೀವು ಬಯಸುತ್ತೀರೊ? (ಯೋಹಾನ 4:24) “ಜೀವನದ ಉದ್ದೇಶವೇನು?” ಎಂಬ ಪ್ರಶ್ನೆಗಿರುವ ಉತ್ತರವನ್ನು ಪಡೆಯಲು ನಿಮ್ಮ ಸಮಾಜದಲ್ಲಿರುವ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯಮಾಡಲು ಹರ್ಷಿಸುವರು. (w06 10/15)