ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ತುತಿಪಾತ್ರನಾದ ಸೃಷ್ಟಿಕರ್ತ

ಸ್ತುತಿಪಾತ್ರನಾದ ಸೃಷ್ಟಿಕರ್ತ

ದೇವರ ಸಮೀಪಕ್ಕೆ ಬನ್ನಿರಿ

ಸ್ತುತಿಪಾತ್ರನಾದ ಸೃಷ್ಟಿಕರ್ತ

ಪ್ರಕಟನೆ 4:⁠11

‘ಬದುಕಿಗೊಂದು ಅರ್ಥವಿದೆಯೇ’ ಎಂಬ ಪ್ರಶ್ನೆಯ ಬಗ್ಗೆ ನೀವು ಯೋಚಿಸಿದ್ದುಂಟೋ? ಜೀವವು ಅಸಂಗತ ವಿಕಾಸವಾದದಿಂದ ಬಂದಿದೆಯೆಂದು ನಂಬುವ ಜನರ ಬಳಿ ಈ ಪ್ರಶ್ನೆಗೆ ಉತ್ತರವಿಲ್ಲ. ಯೆಹೋವ ದೇವರು ಜೀವದ ಮೂಲನು ಎಂಬ ಸ್ಥಿರ-ಸತ್ಯವನ್ನು ಸ್ವೀಕರಿಸುವವರಿಗೆ ಅದರ ಉತ್ತರ ಗೊತ್ತಿದೆ. (ಕೀರ್ತನೆ 36:⁠9) ನಮ್ಮನ್ನು ಸೃಷ್ಟಿಸಿದ್ದರಲ್ಲಿ ಆತನಿಗೆ ಉದ್ದೇಶವಿತ್ತೆಂದು ಅವರು ಬಲ್ಲರು. ಬೈಬಲಿನ ಪ್ರಕಟನೆ ಪುಸ್ತಕದ 4:11ರಲ್ಲಿ ಆ ಉದ್ದೇಶವು ತಿಳಿಸಲ್ಪಟ್ಟಿದೆ. ಅಪೊಸ್ತಲ ಯೋಹಾನನು ಬರೆದ ಆ ಮಾತುಗಳು, ನಾವು ಭೂಮಿಯ ಮೇಲೆ ಏಕಿದ್ದೇವೆ ಎಂಬುದನ್ನು ಹೇಗೆ ವಿವರಿಸುತ್ತವೆಂದು ನೋಡೋಣ.

ಸ್ವರ್ಗದೂತರು ದೇವರನ್ನು ಕೊಂಡಾಡುತ್ತಾ ಹಾಡುವುದನ್ನು ಯೋಹಾನನು ಹೀಗೆ ತಿಳಿಸುತ್ತಾನೆ: “[ಯೆಹೋವನೇ], ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” ಯೆಹೋವನೊಬ್ಬನೇ ಅಂಥಾ ಸ್ತುತಿಗೆ ಪಾತ್ರನೂ ಅರ್ಹನೂ ಆಗಿದ್ದಾನೆ. ಏಕೆ? ಏಕೆಂದರೆ “ಸಮಸ್ತವನ್ನು ಸೃಷ್ಟಿಸಿದಾತನು” ಆತನೇ. ಹಾಗಾದರೆ ಆತನು ಸೃಷ್ಟಿಸಿದ ಬುದ್ಧಿಜೀವಿಗಳು ಏನು ಮಾಡುವಂತೆ ಪ್ರಚೋದಿಸಲ್ಪಡಬೇಕು?

ಯೆಹೋವನು ಪ್ರಭಾವ, ಮಾನ, ಬಲವನ್ನು “ಹೊಂದುವದಕ್ಕೆ” ಯೋಗ್ಯನಾಗಿದ್ದಾನೆ ಎಂದು ಹೇಳಲಾಗಿದೆ. ಆತನು ವಿಶ್ವದಲ್ಲೇ ಅತ್ಯಂತ ಮಹಿಮಾಭರಿತನೂ ಗೌರವಾರ್ಹನೂ ಶಕ್ತಿಶಾಲಿಯೂ ಆದ ಮಹಾನ್‌ ವ್ಯಕ್ತಿಯಾಗಿದ್ದಾನೆ ಎಂಬುದು ನಿಸ್ಸಂಶಯ. ಹಾಗಿದ್ದರೂ ಸಮಸ್ತವನ್ನೂ ಸೃಷ್ಟಿಸಿದವನು ಆತನೇ ಎಂದು ಮಾನವಕುಲದ ಹೆಚ್ಚಿನವರು ಅಂಗೀಕರಿಸುವುದಿಲ್ಲ. ಆದರೂ ದೇವರು ಮಾಡಿದ ಸೃಷ್ಟಿಗಳ ಮೂಲಕ ‘ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳನ್ನು’ ಸ್ಪಷ್ಟವಾಗಿ ಕಾಣುತ್ತಿರುವ ಜನರಿದ್ದಾರೆ. (ರೋಮಾಪುರ 1:20) ಕೃತಜ್ಞತೆ ತುಂಬಿದ ಹೃದಯದಿಂದ ಅವರು ಯೆಹೋವನಿಗೆ ಘನಮಾನವನ್ನು ಸಲ್ಲಿಸಲು ಪ್ರೇರಿಸಲ್ಪಡುತ್ತಾರೆ. ಯೆಹೋವನು ಸಮಸ್ತವನ್ನು ಸೃಷ್ಟಿಸಿದಾತನು, ಆದ್ದರಿಂದ ಆತನು ನಮ್ಮ ಪರಮಪೂಜ್ಯ ಗೌರವಕ್ಕೆ ಅರ್ಹನು ಎಂಬ ಮನಮುಟ್ಟುವ ಪುರಾವೆಯನ್ನು ಕೇಳಬಯಸುವ ಎಲ್ಲರಿಗೆ ಅವರು ಘೋಷಿಸುತ್ತಾರೆ.​—⁠ಕೀರ್ತನೆ 19:​1, 2; 139:⁠14.

ಹಾಗಾದರೆ ಯೆಹೋವನು ತನ್ನ ಆರಾಧಕರಿಂದ ‘ಬಲವನ್ನು’ ಹೊಂದುವುದಾದರೂ ಹೇಗೆ? ನಿಶ್ಚಯವಾಗಿಯೂ ಸರ್ವಶಕ್ತನಾದ ನಿರ್ಮಾಣಿಕನಿಗೆ ಯಾವ ಸೃಷ್ಟಿಜೀವಿಗಳೂ ಬಲವನ್ನು ಕೊಡಲಾರರು. (ಯೆಶಾಯ 40:​25, 26) ಆದರೆ ದೇವರ ಸ್ವರೂಪದಲ್ಲಿ ನಾವು ಸೃಷ್ಟಿಸಲ್ಪಟ್ಟಿರುವುದರಿಂದ ಆತನ ಗುಣಗಳಲ್ಲಿ ಒಂದಾದ ಬಲವನ್ನು ಸ್ವಲ್ಪಮಟ್ಟಿಗೆ ನಾವು ಹೊಂದಿರುತ್ತೇವೆ. (ಆದಿಕಾಂಡ 1:27) ನಮ್ಮ ಸೃಷ್ಟಿಕರ್ತನು ನಮಗಾಗಿ ಮಾಡಿದ್ದನ್ನೆಲ್ಲಾ ನಾವು ನಿಜವಾಗಿ ಗಣ್ಯಮಾಡುವುದಾದರೆ ನಮ್ಮ ಬಲ ಮತ್ತು ಶಕ್ತಿಯನ್ನು ಆತನ ಘನಮಾನಕ್ಕಾಗಿ ಉಪಯೋಗಿಸಲು ಪ್ರೇರಿಸಲ್ಪಡುವೆವು. ನಾವು ಯೆಹೋವನನ್ನು ಸೇವಿಸುವಾಗ ನಮ್ಮ ಬಲವನ್ನು ಕೇವಲ ನಮ್ಮ ಸ್ವಂತ ಅಭಿರುಚಿಗಳ ವರ್ಧನೆಗಾಗಿ ಬಳಸುವುದಿಲ್ಲ. ಬದಲಾಗಿ ನಮ್ಮೆಲ್ಲಾ ಬಲವನ್ನು ಹೊಂದಲು ಯೆಹೋವನು ಮಾತ್ರವೇ ಅರ್ಹನೆಂಬ ಭಾವನೆ ನಮ್ಮಲ್ಲಿರುವುದು.​—⁠ಮಾರ್ಕ 12:⁠30.

ಹೀಗಿರಲಾಗಿ ನಾವು ಭೂಮಿಯಲ್ಲಿ ಇರುವುದಾದರೂ ಏಕೆ? ಪ್ರಕಟನೆ 4:11 ರ ಕೊನೆಯ ಭಾಗ ಏಕೆಂದು ಉತ್ತರಿಸುತ್ತದೆ: “ಎಲ್ಲವು [ಸೃಷ್ಟಿಯೆಲ್ಲವು] ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” ನಾವು ನಮ್ಮನ್ನು ನಾವೇ ಸೃಷ್ಟಿಸಿಕೊಳ್ಳಲಿಲ್ಲ. ನಾವು ಅಸ್ತಿತ್ವಕ್ಕೆ ಬಂದದ್ದು ದೇವರ ಚಿತ್ತದಿಂದಲೇ. ಈ ಕಾರಣದಿಂದಾಗಿ ಸ್ವಾರ್ಥಾಭಿರುಚಿಗಾಗಿ ಮಾತ್ರವೇ ನಾವು ಜೀವಿಸುವುದಾದರೆ ನಮ್ಮ ಬದುಕು ಶೂನ್ಯವೂ ನಿಸ್ಸಾರವೂ ಆಗಿದೆ. ಮನಶ್ಶಾಂತಿ, ಸಂತೋಷ, ಸಂತೃಪ್ತಿ ಮತ್ತು ಪೂರೈಕೆಯನ್ನು ಕಂಡುಕೊಳ್ಳಲು ದೇವರ ಇಚ್ಛೆಯೇನೆಂದು ಕಲಿತು ಅದಕ್ಕೆ ಹೊಂದಿಕೆಯಲ್ಲಿ ನಮ್ಮ ಜೀವನವನ್ನು ನಡೆಸುವ ಅಗತ್ಯವಿದೆ. ಆಗ ಮಾತ್ರ ನಾವು ಬದುಕಿನ ಅರ್ಥವನ್ನೂ ಸೃಷ್ಟಿಸಲ್ಪಟ್ಟದ್ದಕ್ಕೆ ಕಾರಣವನ್ನೂ ಕಂಡುಕೊಳ್ಳುವೆವು.​—⁠ಕೀರ್ತನೆ 40:⁠8. (w08 12/1)

[ಪುಟ 30ರಲ್ಲಿರುವ ಚಿತ್ರ ಕೃಪೆ]

NASA, ESA, and A. Nota (STScI)