ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Natural Disasters​—Evidence That God Is Cruel?

Natural Disasters​—Evidence That God Is Cruel?

ಕೆಲವರು ಹೇಳ್ತಾರೆ: “ಸಮಸ್ತ ಭೂಮಂಡಲದ ಒಡೆಯ ದೇವರು. ಇಲ್ಲಿ ಆಗುತ್ತಿರೋ ನೈಸರ್ಗಿಕ ವಿಪತ್ತಿಗೆ ಅವನೇ ಕಾರಣ. ಅಂದ ಮೇಲೆ ದೇವರು ಕ್ರೂರಿನೇ.”

ಬೈಬಲ್‌ ಹೇಳುತ್ತೆ: “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಯಾರು ಈ ಕೆಡುಕ? ಬೈಬಲ್‌ ಅವನನ್ನು ಸೈತಾನ ಎನ್ನುತ್ತದೆ. (ಮತ್ತಾಯ 13:19; ಮಾರ್ಕ 4:15) ನಂಬಲು ಕಷ್ಟವಾಗುತ್ತಿದೆಯಾ? ಯೋಚಿಸಿ, ಈ ಲೋಕ ಅವನ ವಶದಲ್ಲಿ ಇರೋದರಿಂದ ಜನರ ಮೇಲೆ ಅವನ ಪ್ರಭಾವ ಇದ್ದೇ ಇರುತ್ತದೆ. ಹಾಗಾಗಿ ಅವನಂತೆ ಇಂದು ಮನುಷ್ಯರಲ್ಲೂ ಸ್ವಾರ್ಥ, ದುರಾಸೆ ಇದೆ. ಅವರು ಮಾಡುವ ಕೆಲಸದಲ್ಲಿ ಮುಂದಾಲೋಚನೆ ಇರೋದಿಲ್ಲ. ಇದರಿಂದಲೇ ಮನುಷ್ಯ ತಾನಿರುವ ಭೂಮಿಯನ್ನೇ ಹಾಳು ಮಾಡುತ್ತಿರುವುದು. ಅನೇಕ ತಜ್ಞರು ಕೊಡುವ ಎಚ್ಚರಿಕೆಯೇನೆಂದರೆ ಪರಿಸರವನ್ನು ಸರಿಯಾಗಿ ನೋಡಿಕೊಳ್ಳದಿರುವಲ್ಲಿ ನೈಸರ್ಗಿಕ ವಿಪತ್ತಿಗೆ ಕಾರಣವಾಗುತ್ತದೆ. ಅಂದರೆ ಅದು ನೇರವಾಗಿ ಕಾರಣವಾಗಿರಬಹುದು, ವಿಪತ್ತಿನ ತೀವ್ರತೆಯನ್ನು ಹೆಚ್ಚಿಸುವುದಿರಬಹುದು ಅಥವಾ ವಿಪತ್ತನ್ನು ಸಹಿಸಿಕೊಳ್ಳುವ ಮನುಷ್ಯನ ಶಕ್ತಿಯನ್ನು ಕುಗ್ಗಿಸುವುದಿರಬಹುದು.

ಮನುಷ್ಯನ ಮೇಲೆ ಸೈತಾನ ಇಷ್ಟೊಂದು ಪ್ರಭಾವ ಬೀರುವಂತೆ ದೇವರು ಬಿಟ್ಟದ್ದೇಕೆ? ಉತ್ತರ ತಿಳಿಯಲು ಮಾನವ ಇತಿಹಾಸದ ಆರಂಭದಲ್ಲಿ ನಡೆದ ಘಟನೆಗೆ ಹೋಗೋಣ. ದೇವರಿಂದ ಸೃಷ್ಟಿಯಾದ ಮನುಷ್ಯರು ದೇವರ ಆಧಿಪತ್ಯದ ವಿರುದ್ಧ ದಂಗೆ ಎದ್ದರು. ಅವತ್ತಿಂದ ಅದೇ ಮಾರ್ಗವನ್ನು ಬಹುಪಾಲು ಜನರು ಹಿಡಿದಿದ್ದಾರೆ. ಹೀಗೆ ದೇವರ ಆಧಿಪತ್ಯವನ್ನು ತಿರಸ್ಕರಿಸಿದ್ದರಿಂದಲೇ ಮಾನವಕುಲ ಸೈತಾನನ ತೆಕ್ಕೆಗೆ ಬಿತ್ತು. ಆದ್ದರಿಂದಲೇ ದೇವರ ವೈರಿಯಾದ ಸೈತಾನನನ್ನು “ಈ ಲೋಕದ ಅಧಿಪತಿ” ಅಂತ ಯೇಸು ಕರೆದನು. (ಯೋಹಾನ 14:30) ಈ ಲೋಕ ಸೈತಾನನ ಕೈಯಲ್ಲೇ ಉಳಿದುಬಿಡುತ್ತಾ? ಛೇ ಛೇ ಇಲ್ಲವೇ ಇಲ್ಲ!

ಸೈತಾನನ ಕುಮ್ಮಕ್ಕಿನಿಂದ ಲೋಕದಲ್ಲಿ ಆಗುತ್ತಿರುವ ಕಷ್ಟನಷ್ಟಗಳನ್ನು ನೋಡಿದಾಗ ಯೆಹೋವ * ದೇವರಿಗೆ ಹೇಗನಿಸುತ್ತದೆ? ಮನುಷ್ಯರು ನೋವು ಅನುಭವಿಸುವುದನ್ನು ನೋಡುವಾಗ ದೇವರಿಗೆ ತುಂಬ ದುಃಖವಾಗುತ್ತದೆ. ಪ್ರಾಚೀನ ಇಸ್ರೇಲಿಗಳ ಕಾಲದಲ್ಲಿ ಅವರ ಕಷ್ಟಗಳನ್ನು ನೋಡಿದಾಗ ದೇವರ “ಮನಸ್ಸು ಇಸ್ರಾಯೇಲ್ಯರ ಸಂಕಟದ ನಿಮಿತ್ತ ಬಲು ನೊಂದಿತು.” (ನ್ಯಾಯಸ್ಥಾಪಕರು 10:16) ಇದರ ಅರ್ಥ ದೇವರಿಗೆ ನಮ್ಮ ಮೇಲೆ ತುಂಬ ಕನಿಕರ ಇದೆ. ಹಾಗಾಗಿ ಕ್ರೂರಿಯಾದ ಸೈತಾನನ ಆಧಿಪತ್ಯವನ್ನು ಶೀಘ್ರದಲ್ಲೇ ಕೊನೆಗಾಣಿಸಲು ಈಗಾಗಲೇ ಏರ್ಪಾಡುಗಳನ್ನು ಮಾಡಿದ್ದಾನೆ. ಸದಾ ಸರ್ವದಾ ನ್ಯಾಯದಿಂದ ಆಳ್ವಿಕೆ ಮಾಡಲು ತನ್ನ ಮಗನಾದ ಯೇಸು ಕ್ರಿಸ್ತನನ್ನು ರಾಜನಾಗಿ ನೇಮಿಸಿದ್ದಾನೆ.

ಈಗ ನಿಮಗೇನು ಅನಿಸುತ್ತೆ: ನೈಸರ್ಗಿಕ ವಿಪತ್ತುಗಳಿಂದ ಜನರನ್ನು ತಪ್ಪಿಸಿ ಕಾಪಾಡಲು ಸೈತಾನನಿಗೆ ಸಾಧ್ಯವಾಗಿಲ್ಲ. ಆದರೆ ಯೇಸುವಿಗೆ ಅದು ಸಾಧ್ಯ. ಉದಾ: ಭಾರೀ ಬಿರುಗಾಳಿ ಬೀಸಿದಾಗ ಯೇಸು ತನ್ನ ಅನುಯಾಯಿಗಳನ್ನು ಕಾಪಾಡಿದ್ದನು. ಆ ಘಟನೆಯ ಬಗ್ಗೆ ಬೈಬಲ್‌ನಲ್ಲಿ ಹೀಗೆ ದಾಖಲಾಗಿದೆ: ಯೇಸು “ಗಾಳಿಯನ್ನು ಗದರಿಸಿ ಸಮುದ್ರಕ್ಕೆ, ‘ಷ್‌! ಸುಮ್ಮನಿರು!’ ಎಂದು ಹೇಳಿದನು. ಆಗ ಬಿರುಗಾಳಿಯು ನಿಂತು ಎಲ್ಲವೂ ಶಾಂತವಾಯಿತು.” ಇದನ್ನು ಕಂಡ ಅನುಯಾಯಿಗಳು “ಇವನು ನಿಜವಾಗಿಯೂ ಯಾರು? ಗಾಳಿಯೂ ಸಮುದ್ರವೂ ಇವನ ಮಾತುಗಳನ್ನು ಪಾಲಿಸುತ್ತವಲ್ಲಾ?” ಎಂದರು. (ಮಾರ್ಕ 4:37-41) ಇದು ನಮಗೆ ನೀಡುವ ಭರವಸೆ ಏನೆಂದರೆ ಯೇಸು ಭೂಮಿ ಮೇಲೆ ಆಧಿಪತ್ಯ ನಡೆಸುವಾಗ ಎಲ್ಲ ಒಳ್ಳೇ ಮನುಷ್ಯರನ್ನು ಕಾಪಾಡುತ್ತಾನೆ.—ದಾನಿಯೇಲ 7:13, 14. (w13-E 05/01)

^ ಪ್ಯಾರ. 5 ಬೈಬಲ್‌ನಲ್ಲಿ ಯೆಹೋವ ಎನ್ನುವುದು ದೇವರ ಹೆಸರು.