ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

6 ಪ್ರಾರ್ಥನೆ ಮಾಡೋದರಿಂದ ಪ್ರಯೋಜನ ಇದೆಯಾ?

6 ಪ್ರಾರ್ಥನೆ ಮಾಡೋದರಿಂದ ಪ್ರಯೋಜನ ಇದೆಯಾ?

ದೇವರಿಗೆ ನಾವು ಪ್ರಾರ್ಥನೆ ಮಾಡೋದರಿಂದ ಏನಾದ್ರೂ ಪ್ರಯೋಜನ ಇದೆಯಾ? ದೇವರ ಸೇವಕರು ಪ್ರಾರ್ಥನೆ ಮಾಡಿದಾಗ ಅವರಿಗೆ ತುಂಬ ಪ್ರಯೋಜನ ಆಯ್ತು ಅಂತ ಬೈಬಲ್‌ ಹೇಳುತ್ತೆ. (ಲೂಕ 22:40; ಯಾಕೋಬ 5:13) ಪ್ರಾರ್ಥನೆ ಮಾಡೋದರಿಂದ ದೇವರ ಜೊತೆಗಿರೋ ನಮ್ಮ ಸಂಬಂಧ ಗಟ್ಟಿಯಾಗುತ್ತೆ, ಧೈರ್ಯ ಸಿಗುತ್ತೆ, ಖುಷಿಯಾಗಿ ಇರ್ತೀವಿ ಮತ್ತು ನಮ್ಮ ಆರೋಗ್ಯನೂ ಚೆನ್ನಾಗಿರುತ್ತೆ. ಅದು ಹೇಗೆ ಅಂತ ನಾವು ಮುಂದೆ ನೋಡೋಣ?

ಊಹಿಸಿ, ನಿಮ್ಮ ಮಗುಗೆ ಯಾರಾದ್ರೂ ಒಂದು ಗಿಫ್ಟ್‌ ಕೊಡ್ತಾರೆ. ಆಗ ನೀವೇನು ಮಾಡ್ತೀರಾ? ‘ಕಂದ ಅವರಿಗೆ ಥ್ಯಾಂಕ್ಸ್‌ ಹೇಳು’ ಅಂತ ಹೇಳಿ ಕೊಡ್ತೀರಾ. ನೀವು ಇದನ್ನ ಯಾಕೆ ಮಾಡ್ತೀರಾ? ಮಗು ಆ ಗಿಫ್ಟ್‌ನ್ನ ತಗೊಂಡು ಬರೀ ಖುಷಿ ಪಡೋದಲ್ಲ ಬದಲಿಗೆ ಮಾತಲ್ಲಿ ವ್ಯಕ್ತಿಪಡಿಸಬೇಕು ಅನ್ನೋದು ನಿಮ್ಮ ಇಷ್ಟ. ಮಕ್ಕಳು ಇನ್ನೊಬ್ಬರಿಗೆ ಥ್ಯಾಂಕ್ಸ್‌ ಹೇಳುವಾಗ ಅವರು ಕೊಟ್ಟಂಥ ಗಿಫ್ಟ್‌ನ್ನ ತುಂಬ ಮಾನ್ಯ ಮಾಡ್ತಾರೆ ಅಂತ ತೋರಿಸಿ ಕೊಡ್ತಾರೆ. ನಾವು ದೇವರಿಗೆ ಪ್ರಾರ್ಥನೆ ಮಾಡಿದಾಗ ಇದೇ ರೀತಿಯ ಮನೋಭಾವವನ್ನ ತೋರಿಸಬೇಕು. ಅದು ಹೇಗಂತ ನೋಡೋಣ.

ಧನ್ಯವಾದ ಹೇಳುವ ಪ್ರಾರ್ಥನೆ. ನಾವು ಪ್ರಾರ್ಥನೆಯಲ್ಲಿ ದೇವರಿಗೆ ಧನ್ಯವಾದ ಹೇಳ್ತಾ ಇದ್ರೆ ನಮ್ಮ ಗಮನ ಯಾವಾಗ್ಲೂ ಒಳ್ಳೇ ವಿಷಯಗಳ ಮೇಲೆನೇ ಇರುತ್ತೆ. ನಾವು ಇದ್ರಿಂದ ತುಂಬ ಖುಷಿಯಾಗಿ ಇರ್ತೀವಿ ಮತ್ತು ಆತನ ಕೊಟ್ಟಿರೋ ಆಶೀರ್ವಾದಗಳನ್ನ ತುಂಬ ಮಾನ್ಯ ಮಾಡ್ತೀವಿ ಅಂತ ತೋರಿಸಿಕೊಡ್ತೀವಿ.—ಫಿಲಿಪ್ಪಿ 4:6.

ಉದಾಹರಣೆಗೆ: ಯೆಹೋವ ದೇವರು ಯೇಸುವಿನ ಪ್ರಾರ್ಥನೆಯನ್ನ ಕೇಳಿದರು. ಅದಕ್ಕೆ ಯೇಸು ಆತನಿಗೆ ಧನ್ಯವಾದ ಹೇಳಿದನು.—ಯೋಹಾನ 11:41.

ಕ್ಷಮೆಗಾಗಿ ಪ್ರಾರ್ಥನೆ. ನಾವು ಯಾವುದಾದ್ರೂ ಒಂದು ತಪ್ಪನ್ನ ಮಾಡಿ ಯೆಹೋವ ದೇವರಿಗೆ ಕ್ಷಮೆ ಕೇಳಿದಾಗ ಆ ತಪ್ಪಿನ ಅರಿವು ನಮಗಾಗುತ್ತೆ. ದೇವರ ಮನಸ್ಸನ್ನ ನೋಯಿಸಿದೀವಿ ಅನ್ನೋ ಬೇಜಾರ್‌ ಕೂಡ ಆಗುತ್ತೆ. ಆಗ ನಾವು ಈ ತಪ್ಪನ್ನ ಇನ್ನೊಂದು ಸರಿ ಮಾಡಲೇ ಬಾರದು ಅನ್ನೋ ದೃಢನಿರ್ಧಾರನು ಮಾಡಿಕೊಳ್ತೀವಿ. ದೇವರಿಗೆ ಕ್ಷಮೆ ಕೇಳಿದ ಮೇಲೆ ಆ ತಪ್ಪಿನ ಬಗ್ಗೇನೇ ಮೂರು ಹೊತ್ತು ಯೋಚನೆ ಮಾಡ್ತಾ ಬೇಜಾರ್‌ ಮಾಡಿಕೊಳ್ತಾ ಕೂತುಕೊಳ್ಳಲ್ಲ.

ಉದಾಹರಣೆಗೆ: ದಾವೀದ ತಪ್ಪು ಮಾಡಿದಾಗ ಅವನಿಗೆ ತುಂಬ ಬೇಜಾರಾಯ್ತು. ಆಗ ಅವನು ದೇವರಿಗೆ ಪ್ರಾರ್ಥನೆ ಮಾಡಿ ಕ್ಷಮೆ ಕೇಳಿದ.—ಕೀರ್ತನೆ 51.

ಮಾರ್ಗದರ್ಶನೆ ಮತ್ತು ಬುದ್ಧಿಗಾಗಿ ಮಾಡೋ ಪ್ರಾರ್ಥನೆ. ನಾವು ಯಾವುದೇ ನಿರ್ಣಯಗಳನ್ನ ಮಾಡೋಕ್ಕಿಂತ ಮುಂಚೆ ಮಾರ್ಗದರ್ಶನೆ ಮತ್ತು ಬುದ್ಧಿಗಾಗಿ ಪ್ರಾರ್ಥನೆ ಮಾಡೋದು ನಮ್ಮಲ್ಲಿ ದೀನತೆ ಇದೆ ಅಂತ ತೋರಿಸಿಕೊಡ್ತೀವಿ. ಯಾಕಂದ್ರೆ ನಮ್ಮ ಸ್ವಂತ ಬುದ್ಧಿಯಿಂದ ನಮಗೇನು ಮಾಡೋಕ್ಕಾಗಲ್ಲ ದೇವರ ಸಹಾಯ ಬೇಕೇ ಬೇಕು ಅಂತ ನಮಗೆ ಗೊತ್ತಿದೆ. ಈ ರೀತಿ ನಾವು ದೇವರ ಮೇಲೆ ಸಂಪೂರ್ಣ ಭರವಸೆ ಇಡೋದನ್ನ ಕಲಿತೀವಿ.—ಜ್ಞಾನೋಕ್ತಿ 3:5, 6.

ಉದಾಹರಣೆಗೆ: ರಾಜ ಸೊಲೊಮೋನ ಇಸ್ರಾಯೇಲ್ಯರನ್ನ ಚೆನ್ನಾಗಿ ಆಳ್ವಿಕೆ ಮಾಡೋಕೆ ಮಾರ್ಗದರ್ಶನ ಮತ್ತು ಬುದ್ಧಿಗಾಗಿ ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದ.—1 ಅರಸು 3:5-12.

ಸಹಾಯಕ್ಕಾಗಿ ಮಾಡೋ ಪ್ರಾರ್ಥನೆ. ನಾವು ಯಾವುದಾದ್ರೂ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಾಗ, ನಮಗೇನು ಮಾಡಬೇಕು ಅಂತ ಗೊತ್ತಾಗದೇ ಇರುವಾಗ ನಮ್ಮ ದುಃಖವನ್ನೆಲ್ಲ ಯೆಹೋವನ ಹತ್ತಿರ ಹೇಳಿಕೊಳ್ಳಬೇಕು. ಆಗ ನಮಗೆ ಮನಃಶಾಂತಿ ಸಿಗುತ್ತೆ. ಆಗ ನಮ್ಮ ಮೇಲಲ್ಲ ಯೆಹೋವನ ಮೇಲೆ ಸಂಪೂರ್ಣ ನಂಬಿಕೆಯನ್ನ ಇಡ್ತೀವಿ.—ಕೀರ್ತನೆ 62:8.

ಉದಾಹರಣೆಗೆ: ಶತ್ರು ಸೈನ್ಯಗಳು ಇಸ್ರಾಯೇಲ್ಯರ ಮೇಲೆ ದಾಳಿ ಮಾಡೋಕೆ ಬಂದಾಗ ರಾಜ ಆಸ ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥನೆ ಮಾಡಿದ.—2 ಪೂರ್ವಕಾಲವೃತ್ತಾಂತ 14:11.

ಬೇರೆಯವರಿಗೋಸ್ಕರ ಮಾಡೋ ಪ್ರಾರ್ಥನೆ. ನಾವು ಬೇರೆಯವರಿಗೋಸ್ಕರ ಪ್ರಾರ್ಥನೆ ಮಾಡುವಾಗ ನಮ್ಮ ಬಗ್ಗೆ ಅಷ್ಟೇ ಅಲ್ಲ ಅವರ ಬಗ್ಗೆನೂ ಯೋಚನೆ ಮಾಡ್ತೀವಿ ಅಂತ ತೋರಿಸಿಕೊಡ್ತೀವಿ.

ಉದಾಹರಣೆಗೆ: ಯೇಸು ತನ್ನ ಶಿಷ್ಯರಿಗೋಸ್ಕರ ಯೆಹೋವನ ಹತ್ತಿರ ಪ್ರಾರ್ಥನೆ ಮಾಡಿದನು.—ಯೋಹಾನ 17:9-17.

ಯೆಹೋವನನ್ನ ಸ್ತುತಿಸಲು ಮಾಡೋ ಪ್ರಾರ್ಥನೆ. ನಾವು ಯೆಹೋವನ ಅದ್ಭುತ ಗುಣಗಳು ಮತ್ತು ಆತನ ಕೆಲಸಗಳ ಬಗ್ಗೆ ಪ್ರಾರ್ಥನೆಯಲ್ಲಿ ಸ್ತುತಿಸಿದಾಗ ಆತನ ಮೇಲಿರುವ ಪ್ರೀತಿ ಮತ್ತು ಗೌರವ ಹೆಚ್ಚಾಗುತ್ತೆ. ಈ ರೀತಿ ಮಾಡೋದ್ರಿಂದ ನಾವು ಆತನಿಗೆ ಇನ್ನೂ ಹೆಚ್ಚು ಹತ್ತಿರ ಆಗ್ತೀವಿ.

ಉದಾಹರಣೆಗೆ: ಯೆಹೋವನ ಸೃಷ್ಟಿಯನ್ನ ನೋಡಿ ದಾವೀದನು ಆತನನ್ನ ಮನಸಾರೆ ಸ್ತುತಿಸಿದನು.—ಕೀರ್ತನೆ 8.

ನಮಗೆ ತುಂಬ ನೋವಾದಾಗ ಯೆಹೋವನಿಗೆ ಪ್ರಾರ್ಥನೆ ಮಾಡಿದ್ರೆ ‘ನಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಮಗೆ ಕೊಡ್ತಾನೆ.’ (ಫಿಲಿಪ್ಪಿ 4:7) ಆಗ ನಮ್ಮ ಆರೋಗ್ಯನೂ ಚೆನ್ನಾಗಿ ಇರುತ್ತೆ. (ಜ್ಞಾನೋಕ್ತಿ 14:30) ನಾವು ಬರೀ ಪ್ರಾರ್ಥನೆ ಮಾಡಿದ್ರೆ ಸಾಕಾ ಅಥವಾ ಇನ್ನೇನಾದ್ರೂ ಮಾಡಬೇಕಾ?

ಪ್ರಾರ್ಥನೆ ಮಾಡೋದರಿಂದ ದೇವರ ಜೊತೆಗಿರೋ ನಮ್ಮ ಸಂಬಂಧ ಗಟ್ಟಿಯಾಗುತ್ತೆ, ಧೈರ್ಯ ಸಿಗುತ್ತೆ, ಖುಷಿಯಾಗಿ ಇರ್ತೀವಿ ಮತ್ತು ನಮ್ಮ ಆರೋಗ್ಯನೂ ಚೆನ್ನಾಗಿರುತ್ತೆ