ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 113

ಶಾಂತಿಯ ಸಂಪತ್ತು

ಶಾಂತಿಯ ಸಂಪತ್ತು

(ಯೋಹಾನ 14:27)

  1. 1. ಸರ್ವಶ್ರೇಷ್ಠ ದೇವರು

    ನಮ್ಮ ಯೆಹೋವ.

    ಕ್ರಿಸ್ತ ಯೇಸು ಮೂಲಕ

    ಶಾಂತಿ ನೀಡುವ.

    ಯುದ್ಧ ಭೂಮಿ ಆಗುತೆ

    ಶಾಂತಿ ಸಾಮ್ರಾಜ್ಯ;

    ಭೂಮಿಯಲ್ಲಿ ನೆಮ್ಮದಿ

    ಬಾಳೋದು ನಿಜ.

  2. 2. ನಾವು ಕೋಪ ದ್ವೇಷದ

    ಮಾತೇ ಆಡಲ್ಲ.

    ಹಾನಿ ಮಾಡೋ ಆಯುಧ

    ನಮ್ಮಲ್ಲಿ ಇಲ್ಲ.

    ಎಲ್ಲರನ್ನು ಮನ್ನಿಸಿ

    ಪ್ರೀತಿ ತೋರುತ್ತಾ;

    ಯೇಸು ಮಾರ್ಗ ಪಾಲಿಸಿ

    ಬಾಳೋಣ ಸದಾ.

  3. 3. ನಮ್ಮ ಪ್ರೀತಿ ಏಕತೆ

    ಸಾಕ್ಷಿ ಹೇಳಿದೆ

    ದೇವ ನೀಡೊ ಶಾಂತಿಯು

    ನಮ್ಮ ಮೇಲಿದೆ

    ನಾವು ಎಂದೂ ದೇವರ

    ಆಜ್ಞೆ ಪಾಲಿಸಿ;

    ಕಾಪಾಡೋಣ ಶಾಂತಿಯ

    ಪ್ರೀತಿ ತೋರಿಸಿ.