ಮಾಹಿತಿ ಇರುವಲ್ಲಿ ಹೋಗಲು

ಮಲ್ಟಿಟಾಸ್ಕಿಂಗ್‌ ಮಾಡೋದ್ರ ಬಗ್ಗೆ ನನಗೇನು ಗೊತ್ತಿರಬೇಕು?

ಮಲ್ಟಿಟಾಸ್ಕಿಂಗ್‌ ಮಾಡೋದ್ರ ಬಗ್ಗೆ ನನಗೇನು ಗೊತ್ತಿರಬೇಕು?

ಯುವ ಜನರ ಪ್ರಶ್ನೆಗಳು

 ನೀವು ಚೆನ್ನಾಗಿ ಮಲ್ಟಿಟಾಸ್ಕಿಂಗ್‌ ಮಾಡ್ತೀರಾ?

 ಮಲ್ಟಿಟಾಸ್ಕಿಂಗ್‌ ಅಂದ್ರೆ ಒಂದೇ ಸಾರಿಗೆ ಎರಡು-ಮೂರು ಕೆಲ್ಸ ಮಾಡೋದು. ಈ ತರ ಮಲ್ಟಿಟಾಸ್ಕಿಂಗ್‌ ಮಾಡೋಕೆ ನಿಮಗೆ ಗೊತ್ತಾ? ಟೆಕ್ನಾಲಜಿ ಜೊತೆ ಬೆಳೆದಿರೋ ಚಿಕ್ಕವರು (ಡಿಜಿಟಲ್‌ ನೇಟಿವ್ಸ್‌) ಟೆಕ್ನಾಲಜಿ ಬಗ್ಗೆ ಆಮೇಲೆ ಕಲಿತಿರೋ ದೊಡ್ಡವರಿಗಿಂತ (ಡಿಜಿಟಲ್‌ ಇಮಿಗ್ರಂಟ್‌) ಚೆನ್ನಾಗಿ ಮಲ್ಟಿಟಾಸ್ಕಿಂಗ್‌ ಮಾಡ್ತಾರೆ ಅಂತ ತುಂಬ ಜನ ನೆನಸ್ತಾರೆ. ಅದು ನಿಜನಾ?

 ನಿಜನಾ? ಸುಳ್ಳಾ?

  •   ಎರಡೆರಡು ಕೆಲ್ಸ ಒಟ್ಟಿಗೆ ಮಾಡಿದ್ರೆ ಟೈಮ್‌ ಉಳಿಯುತ್ತೆ.

  •   ಮಲ್ಟಿಟಾಸ್ಕಿಂಗ್‌ ಮಾಡ್ತಾ ಹೋದ ಹಾಗೆ ಚುರುಕು ಆಗ್ತೀರ.

  •   ದೊಡ್ಡವರಿಗಿಂತ ಚಿಕ್ಕವರು ಎರಡು-ಮೂರು ಕೆಲ್ಸ ಮಾಡೋದ್ರಲ್ಲಿ ಎತ್ತಿದ ಕೈ.

 ಇದಕ್ಕೆ ನೀವು “ಹೌದು” ಅಂತ ಹೇಳಿದ್ರೆ ಅದ್ರ ಅರ್ಥ ನಿಮಗ್ಯಾರೋ ಟೋಪಿ ಹಾಕಿದ್ದಾರೆ ಅಂತ.

 ಮಲ್ಟಿಟಾಸ್ಕಿಂಗ್‌ ಬಗ್ಗೆ ಇರೋ ಸತ್ಯಗಳು

 ನಿಮಗೇನ್‌ ಅನ್ಸುತ್ತೆ, ಒಂದೇ ಟೈಮಲ್ಲಿ ಎರಡು ಕೆಲ್ಸಗಳನ್ನ ನಿಮ್ಮಿಂದ ಮಾಡಕ್ಕಾಗುತ್ತಾ? ಕೆಲವೊಂದು ಕೆಲ್ಸಗಳನ್ನ ಒಟ್ಟಿಗೆ ಚೆನ್ನಾಗಿ ಗಮನ ಕೊಟ್ಟು ಮಾಡಬಹುದು. ಉದಾಹರಣೆಗೆ, ಸಂಗೀತ ಕೇಳ್ತಾ ಮನೆಯನ್ನ ಚೆನ್ನಾಗಿ ಕ್ಲೀನ್‌ ಮಾಡಬಹುದು.

 ಆದ್ರೆ ತುಂಬ ಗಮನ ಕೊಟ್ಟು ಮಾಡಬೇಕಾದ ಎರಡು ಕೆಲ್ಸಗಳನ್ನ ಒಟ್ಟಿಗೆ ಮಾಡಿದ್ರೆ ಒಂದು ಕೆಲ್ಸನೂ ನೆಟ್ಟಗೆ ಮಾಡಕ್ಕಾಗಲ್ಲ. ಅದಕ್ಕೆ ಕ್ಯಾತ್ರೀನ್‌ ಅನ್ನೋ ಹುಡುಗಿ ಮಲ್ಟಿಟಾಸ್ಕಿಂಗ್‌ ಬಗ್ಗೆ ಹೀಗೆ ಹೇಳ್ತಾಳೆ: “ಎರಡು-ಮೂರು ಕೆಲ್ಸ ಮಾಡೋಕೆ ಹೋಗಿ ನಾನು ಎಲ್ಲಾನೂ ಹಾಳು ಮಾಡಿಬಿಡ್ತೀನಿ.”

 “ನಾನು ಒಬ್ಬ ಫ್ರೆಂಡ್‌ ಹತ್ರ ಮಾತಾಡ್ತಾ ಇದ್ದೆ. ಆಗ ನನ್‌ ಮೊಬೈಲಿಗೆ ಮೆಸೆಜ್‌ ಬಂತು. ನಾನು ರಿಪ್ಲೈ ಮಾಡ್ಲೇಬೇಕಿತ್ತು. ಅವನ ಹತ್ರ ಮಾತಾಡ್ತಾ ಮೊಬೈಲಿಂದ ಮೆಸೆಜ್‌ ಮಾಡ್ದೆ. ಆಕಡೆ ಫ್ರೆಂಡ್‌ ಹೇಳಿದ್ದನ್ನೂ ನಾನು ಸರಿಯಾಗಿ ಕೇಳಿಸ್ಕೊಂಡಿಲ್ಲ. ಈಕಡೆ ನೆಟ್ಟಗೆ ಮೆಸೆಜೂ ಮಾಡಿಲ್ಲ, ತಪ್ಪುತಪ್ಪಾಗಿ ಟೈಪ್‌ ಮಾಡಿ ಕಳಿಸಿಬಿಟ್ಟೆ.”—ಕೆಲಬ್‌.

 ಟೆಕ್ನಾಲಜಿ ಎಕ್ಸ್‌ಪರ್ಟ್‌ ಶೆರೀ ಟರ್ಕಲ್‌ ಹೀಗೆ ಹೇಳ್ತಾಳೆ: “ಒಂದೇ ಟೈಮಲ್ಲಿ ಮೂರು-ನಾಲ್ಕು ಕೆಲ್ಸಗಳನ್ನ ಚೆನ್ನಾಗಿ ಮಾಡ್ತಾ ಇದ್ದೀವಿ ಅಂತ ನಮಗೆ ಅನ್ಸುತ್ತೆ. ಆದ್ರೆ ಮಾಡಿದ ಕೆಲ್ಸ ಎಲ್ಲಾ ಹಾಳಾಯ್ತು ಅಂತ ಕೊನೇಲಿ ಗೊತ್ತಾಗುತ್ತೆ. ಮಲ್ಟಿಟಾಸ್ಕಿಂಗ್‌ ಮಾಡುವಾಗ ಬ್ರೈನಿಂದ ಕೆಮಿಕಲ್‌ಗಳು ಬಿಡುಗಡೆ ಆಗಿ ತುಂಬ ಶಕ್ತಿ ಬಂದ ಹಾಗೆ ಅನ್ಸುತ್ತೆ. ಎಲ್ಲಾ ಕೆಲ್ಸ ಸಕ್ಕತ್ತಾಗಿ ಮಾಡ್ತಾ ಇದ್ದೀವಿ ಅಂತ ಅಂದ್ಕೋಳ್ತೀವಿ. ಆದ್ರೆ ನಿಜ ಏನಂದ್ರೆ ಆ ಕೆಲ್ಸ ಎಲ್ಲಾ ಕರಾಬಾಗಿ ಇರುತ್ತೆ.” a

 “ಒಬ್ಬರ ಹತ್ರ ಮಾತಾಡ್ತಾ ಇನ್ನೊಬ್ರಿಗೆ ಮೆಸೆಜ್‌ ಮಾಡೋದು ಜುಜುಬಿ ಕೆಲ್ಸ ಅಂತ ನಾನು ಅಂದ್ಕೊಂಡಿದ್ದೆ. ಆದ್ರೆ ನಾನೇನು ಮೆಸೆಜ್‌ ಕಳಿಸಬೇಕಿತ್ತೋ ಅದನ್ನ ನನ್ನ ಒಟ್ಟಿಗೆ ಇದ್ದವ್ರಿಗೆ ಹೇಳಿಬಿಟ್ಟೆ, ಅವ್ರಿಗೆ ಹೇಳಬೇಕಾಗಿದ್ದ ವಿಷ್ಯಾನ ಮೆಸೆಜಲ್ಲಿ ಕಳಿಸಿಬಿಟ್ಟೆ!”—ಟಮಾರ.

 ಮಲ್ಟಿಟಾಸ್ಕಿಂಗ್‌ ಮಾಡುವವ್ರಿಗೆ ಕೆಲ್ಸ ಇನ್ನೂ ಕಷ್ಟ ಆಗುತ್ತೆ. ಉದಾಹರಣೆಗೆ ಹೋಮ್‌ವರ್ಕ್‌ ಮಾಡೋ ವಿಷ್ಯ ತಗೊಳ್ಳೋಣ. ಮಲ್ಟಿಟಾಸ್ಕಿಂಗ್‌ ಮಾಡೋದ್ರಿಂದ ಹೋಮ್‌ವರ್ಕ್‌ ಬೇಗ ಬೇಗ ಆಗುತ್ತೆ ಅಂದ್ಕೊಂಡ್ರೆ ಜಾಸ್ತಿ ಟೈಮ್‌ ತಗೊಳ್ಳುತ್ತೆ ಅಥ್ವಾ ಹೋಮ್‌ವರ್ಕಲ್ಲಿ ಏನಾದ್ರೂ ತಪ್ಪು ಮಾಡಿಬಿಟ್ರೆ ಅದನ್ನೆಲ್ಲ ಮತ್ತೆ ಇನ್ನೊಂದು ಸಾರಿ ಮಾಡಬೇಕಾಗುತ್ತೆ. ಎಷ್ಟು ಹೊತ್ತು ಆಗಿಬಿಡುತ್ತಂದ್ರೆ ಬೇರೆ ಕೆಲ್ಸ ಮಾಡೋಕೆ ಟೈಮೇ ಇರಲ್ಲ!

 ಈ ಕಾರಣಕ್ಕೆ ಮನಶಾಸ್ತ್ರಜ್ಞ (ಸೈಕೋಥೆರಪಿಸ್ಟ್‌) ಮತ್ತು ಶಾಲಾ ಸಲಹೆಗಾರ ಥಾಮಸ್‌ ಕಾರ್‌ಸ್ಟಿಂಗ್‌ ಹೀಗೆ ಹೇಳ್ತಾರೆ: “ನಮ್ಮ ಬ್ರೈನ್‌ ಮುಖ್ಯವಾದ ವಿಷ್ಯಗಳಿರೋ ಫೈಲುಗಳನ್ನ ನೀಟಾಗಿ ಜೋಡಿಸಿಟ್ಟಿರೋ ಒಂದು ಬುಕ್‌ ಶೆಲ್ಫ್‌ ತರ. ಮಲ್ಟಿಟಾಸ್ಕಿಂಗ್‌ ಮಾಡೋ ಜನ್ರ ಬ್ರೈನ್‌ ನೋಡಿದ್ರೆ ಆ ಶೆಲ್ಫ್‌ ಅಲ್ಲಿ ಫೈಲುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತೆ.” b

 “ಜಾಸ್ತಿ ಕೆಲ್ಸಗಳನ್ನ ಒಟ್ಟಿಗೆ ಮಾಡೋಣ ಅಂದ್ಕೊಂಡ್ರೆ ಮುಖ್ಯ ವಿಷ್ಯಗಳು ಮಿಸ್‌ ಆಗೋದು ಜಾಸ್ತಿ. ಜಾಸ್ತಿ ಕಷ್ಟ ಪಡಬೇಕಾಗುತ್ತೆ, ಜಾಸ್ತಿ ಟೈಮ್‌ ಹೋಗುತ್ತೆ. ಉಳಿಸಬಹುದು ಅಂತ ಅಂದ್ಕೊಂಡ ಟೈಮೆಲ್ಲ ಪುರ್ರಂತ ಹಾರಿ ಹೋಗುತ್ತೆ.”—ಥೆರೆಸ.

ಎರಡೆರಡು ಕೆಲ್ಸ ಒಟ್ಟಿಗೆ ಮಾಡಿದ್ರೆ ಎರಡು ರೋಡಲ್ಲಿ ಒಂದೇ ಸಲ ಗಾಡಿ ಓಡಿಸಿದ ಹಾಗೆ

 ಇದಕ್ಕೇನು ಪರಿಹಾರ?

  •   ಒಂದು ಟೈಮ್‌ಗೆ ಒಂದೇ ಕೆಲ್ಸ ಮಾಡಿ. ಕೆಲವ್ರಿಗೆ ಹೋಮ್‌ವರ್ಕ್‌ ಮಾಡ್ತಾ ಇನ್ನೊಂದು ಕಡೆ ಫ್ರೆಂಡ್‌ಗೆ ಮೆಸೆಜ್‌ ಮಾಡೋ ರೂಢಿ ಇರುತ್ತೆ. ಈ ತರ ಎರಡೆರಡು ಕೆಲ್ಸಗಳನ್ನ ಮಾಡೋರಿಗೆ ಒಂದು ಕೆಲ್ಸನ ನೆಟ್ಟಗೆ ಗಮನಕೊಟ್ಟು ಮಾಡು ಅಂತ ಹೇಳಿದ್ರೆ ಕಷ್ಟ ಆಗುತ್ತೆ. ಬೈಬಲ್‌ ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ’ ಅಂತ ಹೇಳುತ್ತೆ. (ಫಿಲಿಪ್ಪಿ 1:10) ನಾವು ಮಾಡೋ ಎಲ್ಲ ಕೆಲ್ಸಗಳು ಪ್ರಾಮುಖ್ಯವಾದ ಕೆಲ್ಸಗಳಲ್ಲ. ಹಾಗಾಗಿ ಯಾವ ಕೆಲ್ಸ ಮುಖ್ಯ ಅಂತ ಮೊದ್ಲು ಯೋಚನೆ ಮಾಡಿ ಅದಕ್ಕೆ ಮಾತ್ರ ಗಮನಕೊಟ್ಟು ಮುಗಿಸಿಬಿಡಿ.

     “ಅಲೆದಾಡೋ ಮನಸ್ಸು ಚಿಕ್ಕ ಮಗು ತರ. ನೋಡಿದ್ದೆಲ್ಲ ಬೇಕು ಅನ್ನುತ್ತೆ. ಆದ್ರೆ ನೀವು ಅದಕ್ಕೆ ‘ಅದು ಬೇಡ, ಇದು ತಗೊ’ ಅಂತ ಹೇಳಬೇಕಾಗುತ್ತೆ.”—ಮರಿಯ.

  •   ಗಮನ ಬೇರೆ ಕಡೆ ಹೋಗದಿರೋ ತರ ನೋಡ್ಕೊಳ್ಳಿ. ಓದ್ತಿರಬೇಕಿದ್ರೆ ಆಗಾಗ ಫೋನ್‌ ನೋಡಬೇಕು-ನೋಡಬೇಕು ಅಂತ ಅನ್ಸುತ್ತಾ? ಅನಿಸಿದ್ರೆ ಫೋನನ್ನ ಬೇರೆ ರೂಮಲ್ಲಿ ಇಡಿ. ಟಿವಿ ಆಫ್‌ ಮಾಡಿ. ಸೋಶಿಯಲ್‌ ಮೀಡಿಯವನ್ನ ಇಣಿಕಿ ನೋಡಬೇಡಿ. ಬೈಬಲ್‌ ಹೇಳೋ ತರ “ಸಮಯವನ್ನ ಮುಖ್ಯ ವಿಷ್ಯಗಳಿಗೆ ಬಳಸಿ.”—ಕೊಲೊಸ್ಸೆ 4:5, ನೂತನ ಲೋಕ ಭಾಷಾಂತರ.

     “ನಾನು ಒಂದೊಂದೇ ಕೆಲ್ಸದ ಮೇಲೆ ಮನಸ್ಸಿಟ್ಟು ಮಾಡೋದ್ರಿಂದ ಆ ಕೆಲ್ಸನ ಚೆನ್ನಾಗಿ ಮಾಡೋಕೆ ಆಗ್ತಿದೆ. ಒಂದು ಕೆಲ್ಸ ಮುಗಿತು ಅಂತ ಲಿಸ್ಟಲ್ಲಿ ಟಿಕ್‌ ಹಾಕಿ ಇನ್ನೊಂದು ಕೆಲ್ಸಕ್ಕೆ ಕೈ ಹಾಕುವಾಗ ದಿಲ್‌ ಖುಷ್‌ ಆಗುತ್ತೆ, ತೃಪ್ತಿ ಸಿಗುತ್ತೆ.”—ಓನ್ಯ.

  •   ಯಾರಾದ್ರೂ ನಿಮ್ಮ ಹತ್ರ ಮಾತಾಡುವಾಗ ಪೂರ್ತಿ ಗಮನಕೊಡಿ. ಒಬ್ಬರು ನಿಮ್ಮ ಹತ್ರ ಮಾತಾಡುವಾಗ ನೀವು ಫೋನ್‌ ನೋಡ್ತಾ ಇದ್ರೆ ನೀವು ಗೌರವ ಕೊಡ್ತಿಲ್ಲ ಅಂತಾಗುತ್ತೆ. ಅಷ್ಟೇ ಅಲ್ಲ, ಮಾತುಕತೆ ಅಲ್ಲೇ ನಿಂತೋಗುತ್ತೆ. ಜನ್ರು ನಿಮ್ಮ ಹತ್ರ ಹೇಗೆ ನಡ್ಕೊಳ್ಳಬೇಕು ಅಂತ ನೀವು ಇಷ್ಟಪಡ್ತಿರೋ ಅದೇ ತರ ನೀವು ಅವ್ರ ಹತ್ರ ನಡ್ಕೊಳ್ಳಿ.—ಮತ್ತಾಯ 7:12.

     “ನಾನು ತಂಗಿ ಜೊತೆ ಮಾತಾಡುವಾಗ ಕೆಲವೊಮ್ಮೆ ಅವಳು ಬೇರೆಯವ್ರಿಗೆ ಮೆಸೆಜ್‌ ಮಾಡ್ತಾ ಇರ್ತಾಳೆ. ಆಗ ಎರಡು ಬಾರಿಸಬೇಕು ಅಂತನಿಸುತ್ತೆ. ಆದ್ರೆ ನಿಜ ಹೇಳಬೇಕಂದ್ರೆ ನಾನೇ ಎಷ್ಟೋ ಸಾರಿ ಹಾಗೆ ಮಾಡಿದ್ದೀನಿ.”—ಡೇವಿಡ್‌.

a ರೀಕ್ಲೈಮಿಂಗ್‌ ಕಾನ್‌ವರ್ಸೇಷನ್‌ ಅನ್ನೋ ಪುಸ್ತಕದಿಂದ.

b ಡಿಸ್‌ಕನೆಕ್ಟಡ್‌ ಅನ್ನೋ ಪುಸ್ತಕದಿಂದ.