ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾರಿಗೆ ಪ್ರಾಯೋಗಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಹಾಯದ ಅಗತ್ಯವಿದೆಯೆಂದು ಅರ್ಥ ಮಾಡಿಕೊಳ್ಳಿ

ನೀವು ನಿಮ್ಮ ಸಭೆಗೆ ಸಹಾಯ ಮಾಡುವಿರಾ?

ನೀವು ನಿಮ್ಮ ಸಭೆಗೆ ಸಹಾಯ ಮಾಡುವಿರಾ?

ಯೇಸು ಸ್ವರ್ಗಕ್ಕೆ ಹೋಗುವ ಮುಂಚೆ ತನ್ನ ಶಿಷ್ಯರಿಗೆ ನೀವು “ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಎಂದು ಹೇಳಿದ್ದನು. (ಅ. ಕಾ. 1:8) ಈ ದೊಡ್ಡ ಗುರಿಯನ್ನು ಮುಟ್ಟಲು ಪ್ರಥಮ ಶತಮಾನದ ಕ್ರೈಸ್ತರಿಗೆ ಹೇಗೆ ಸಾಧ್ಯವಾಯಿತು?

ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ಪ್ರೂಫೆಸರ್‌ ಮಾರ್ಟಿನ್‌ ಗುಡ್‌ಮ್ಯಾನ್‌ ಗಮನಿಸಿದ್ದು “ರೋಮನ್‌ ಸಾಮ್ರಾಜ್ಯದಲ್ಲಿ ಗುರಿ ಸಾಧಿಸುವ ಛಲ ನಿಜ ಕ್ರೈಸ್ತರಿಗೆ ಮಾತ್ರ ಇತ್ತು, ಆ ಛಲ ಯಾವ ಧಾರ್ಮಿಕ ಗುಂಪಿಗೂ ಇರಲಿಲ್ಲ, ಯೆಹೂದ್ಯರಿಗೂ ಇರಲಿಲ್ಲ.” ಯೇಸು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸೇವೆ ಮಾಡಲು ಪ್ರಯಾಣಿಸುತ್ತಿದ್ದನು. ಯಾರು ಸುವಾರ್ತೆ ಕಡೆಗೆ ಆಸಕ್ತರಾಗಿದ್ದರೊ ಅವರನ್ನು ಹುಡುಕುವುದು “ದೇವರ ರಾಜ್ಯದ ಸುವಾರ್ತೆಯನ್ನು” ಹಬ್ಬಿಸುವುದರಲ್ಲಿ ಸೇರಿತ್ತು ಎಂದು ನಿಜ ಕ್ರೈಸ್ತರು ಅರಿತಿದ್ದಿರಬಹುದು. (ಲೂಕ 4:43) ಹಾಗಾಗಿ ಈ ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿ “ಅಪೊಸ್ತಲರು” ಇದ್ದರು. ಈ ಹೆಸರಿನ ಅರ್ಥ ಬೇರೆ ಬೇರೆ ಕಡೆ ಹೋಗುವ ಪ್ರತಿನಿಧಿಗಳು ಎಂದಾಗಿತ್ತು. (ಮಾರ್ಕ 3:14) ಯೇಸು ತನ್ನ ಶಿಷ್ಯರಿಗೆ “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂದು ಆಜ್ಞಾಪಿಸಿದನು.—ಮತ್ತಾ. 28:18-20.

ಈಗ ನಮ್ಮೊಂದಿಗೆ ಯೇಸುವಿನ 12 ಅಪೊಸ್ತಲರು ಭೂಮಿಮೇಲೆ ಇಲ್ಲ ನಿಜ, ಆದರೆ ಈಗ ಅನೇಕ ಯೆಹೋವನ ಸೇವಕರು ಮಿಷನೆರಿ ಮನೋಭಾವ ತೋರಿಸುವವರು ನಮ್ಮ ಜೊತೆ ಇದ್ದಾರೆ. ಸುವಾರ್ತೆಯನ್ನು ಹಬ್ಬಿಸುವ ಕರೆಗೆ ಓಗೊಟ್ಟು ಅವರು “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳುತ್ತಿದ್ದಾರೆ. (ಯೆಶಾ. 6:8) ಗಿಲ್ಯಡ್‌ ಶಾಲೆಯ ಸಾವಿರಾರು ಪದವೀಧರರು ತಮ್ಮ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗಿದ್ದಾರೆ. ಕೆಲವರು ತಾವಿರುವ ದೇಶದಲ್ಲೇ ಅಗತ್ಯವಿರುವ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಅನೇಕರು ಬೇರೆ ಭಾಷೆ ಕಲಿತು ಆ ಭಾಷೆಯ ಸಭೆಗೆ ಅಥವಾ ಗುಂಪಿಗೆ ಸಹಾಯ ಮಾಡುತ್ತಿದ್ದಾರೆ. ಈ ಸಹೋದರ ಸಹೋದರಿಯರಿಗೆ ತೊಂದರೆ, ಸಮಸ್ಯೆಗಳಿದ್ದವು. ಆದರೂ ದೇವರ ಮತ್ತು ತಮ್ಮ ನೆರೆಯವರ ಮೇಲಿನ ಪ್ರೀತಿಯಿಂದ ಸ್ವತ್ಯಾಗದ ಮನೋಭಾವ ತೋರಿಸಿದ್ದಾರೆ. ತಮ್ಮ ಖರ್ಚನ್ನು ತಾವೇ ನೋಡಿಕೊಂಡು ಸೇವೆ ಮಾಡುತ್ತಿದ್ದಾರೆ. (ಲೂಕ 14:28-30) ಇಂತಹ ಹೆಜ್ಜೆಗಳನ್ನು ತೆಗೆದುಕೊಂಡು ನಿಜವಾದ ಅಗತ್ಯವನ್ನು ಪೂರೈಸುವುದರಲ್ಲಿ ಸಹೋದರ ಸಹೋದರಿಯರು ಸಹಾಯಮಾಡುತ್ತಿದ್ದಾರೆ.

ಆದರೆ, ಪರಿಸ್ಥಿತಿಗಳು ಬೇರೆ ಬೇರೆ ಇರುತ್ತವೆ. ಎಲ್ಲಾ ಸಾಕ್ಷಿಗಳಿಗೆ ಬೇರೆ ಸ್ಥಳಗಳಿಗೆ ಹೋಗಲು, ಬೇರೆ ಭಾಷೆ ಕಲಿಯಲು ಆಗುವುದಿಲ್ಲ. ಹಾಗಾದರೆ ನಾವು ನಮ್ಮ ಸ್ವಂತ ಸಭೆಯಲ್ಲಿ ಮಿಷನೆರಿ ಮನೋಭಾವವನ್ನು ತೋರಿಸಬಹುದಾ?

ನಿಮ್ಮ ಸಭೆಯಲ್ಲಿ ನೀವು ಮಿಷನೆರಿಗಳಾಗಿರಿ

ನಿಜವಾದ ಅಗತ್ಯದಲ್ಲಿರುವವರಿಗೆ ನಿಮ್ಮಿಂದಾದಷ್ಟು ಸಹಾಯ ಮಾಡಿ . . .

ಪ್ರಥಮ ಶತಮಾನದ ಕ್ರೈಸ್ತರು ಮಿಷನೆರಿ ಮನೋಭಾವವನ್ನು ತೋರಿಸಿದರು. ಅವರಲ್ಲಿ ಅನೇಕರು ತಮ್ಮ ಸ್ವಂತ ಊರುಗಳಲ್ಲೇ ಇದ್ದು ಸೇವೆಮಾಡುತ್ತಿದ್ದರು. ಆದರೂ ಅವರಿಗೆ, “ಸೌವಾರ್ತಿಕನ ಕೆಲಸವನ್ನು ಮಾಡು, ನಿನ್ನ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸು” ಎಂದು ತಿಮೊಥೆಯನಿಗೆ ಪೌಲನು ಕೊಟ್ಟ ಬುದ್ಧಿವಾದ ಅನ್ವಯವಾಗುತ್ತದೆ. ಈ ಬುದ್ಧಿವಾದ ಇಂದಿರುವ ಎಲ್ಲಾ ದೇವಸೇವಕರಿಗೂ ಅನ್ವಯ. (2 ತಿಮೊ. 4:5) ಎಲ್ಲಾ ಕ್ರೈಸ್ತರು ಸುವಾರ್ತೆಯನ್ನು ಸಾರುವ, ಶಿಷ್ಯರನ್ನಾಗಿ ಮಾಡುವ ಆಜ್ಞೆಯನ್ನು ಎಲ್ಲೇ ಇದ್ದರೂ ಪಾಲಿಸಬೇಕು. ಮಿಷನೆರಿ ಕೆಲಸದ ಹಲವಾರು ಅಂಶಗಳನ್ನು ಸ್ಥಳೀಯ ಸಭೆಯಲ್ಲಿಯೂ ಅನ್ವಯಿಸಿಕೊಳ್ಳಬಹುದು.

ಉದಾಹರಣೆಗೆ, ವಿದೇಶದಲ್ಲಿ ಮಿಷನೆರಿಗಳಿಗೆ ಹೊಸ ನೇಮಕದಲ್ಲಿ ಜಾಣ್ಮೆಯಿಂದ ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತಾರೆ. ನಮಗೆ ಅಗತ್ಯವಿರುವ ಕಡೆಗೆ ಹೋಗಲು ಆಗದಿದ್ದರೆ ನಾವೇನು ಮಾಡಬಹುದು? ನಮ್ಮ ಸಭಾ ಸೇವಾಕ್ಷೇತ್ರದ ಬಗ್ಗೆ ನಮಗೆಲ್ಲ ಗೊತ್ತು ಅಂತ ಅಂದುಕೊಳ್ಳುತ್ತೇವಾ? ಅಥವಾ ಹೊಸ ವಿಧಾನಗಳಲ್ಲಿ ಸುವಾರ್ತೆ ಸಾರಲು ಪ್ರಯತ್ನಿಸುತ್ತೇವಾ? ಉದಾಹರಣೆಗೆ, 1940⁠ರಲ್ಲಿ ವಾರಕ್ಕೊಂದು ದಿನ ಬೀದಿ ಸಾಕ್ಷಿಕಾರ್ಯ ಮಾಡಲು ಶೆಡ್ಯೂಲ್‌ ಮಾಡುವಂತೆ ಸಹೋದರರನ್ನು ಪ್ರೋತ್ಸಾಹಿಸಲಾಯಿತು. ಈ ವಿಧಾನವನ್ನ ಮಾಡಲು ನೀವೇಕೆ ಪ್ರಯತ್ನಿಸಬಾರದು? ತಳ್ಳುಬಂಡಿ ಸಾಕ್ಷಿಕಾರ್ಯ ಮಾಡಲು ನೀವೇ ಮೊದಲ ಹೆಜ್ಜೆ ತೆಗೆದುಕೊಳ್ಳಬಹುದಲ್ಲ? ಮುಖ್ಯ ವಿಷಯವೇನೆಂದರೆ ಸುವಾರ್ತೆಯನ್ನು ತಿಳಿಸಲು ಈ ವರೆಗೆ ಪ್ರಯತ್ನಿಸದಿರುವ ಹೊಸ ವಿಧಾನಗಳನ್ನು ನೀವು ಪ್ರಯತ್ನಿಸಿ ನೋಡಿ.

“ಸೌವಾರ್ತಿಕನ ಕೆಲಸವನ್ನು” ಮಾಡಲು ಇತರರಿಗೆ ಪ್ರೋತ್ಸಾಹಿಸಿ

ಹೊಸ ವಿಧಾನಗಳನ್ನು ಬಳಸಿದರೆ ಫಲ ಸಿಗುತ್ತೆ, ಜನರು ನಮ್ಮ ಸುವಾರ್ತೆ ಕೇಳುತ್ತಾರೆ ಎನ್ನುವ ಮನೋಭಾವ ನಮ್ಮಲ್ಲಿದ್ದರೆ ಸೇವೆಯನ್ನು ಹುರುಪು ಮತ್ತು ಉತ್ಸಾಹದಿಂದ ಮಾಡಲು ಸಹಾಯವಾಗುತ್ತದೆ. ಅಗತ್ಯವಿರುವ ಕಡೆಗೆ ಹೋದವರು ಅಥವಾ ಬೇರೆ ಭಾಷೆ ಕಲಿತು ಸೇವೆ ಮಾಡಲು ಹೋದವರು ಸಾಮಾನ್ಯವಾಗಿ ಒಳ್ಳೇ ಅರ್ಹತೆಯುಳ್ಳ ಪ್ರಚಾರಕರಾಗಿರುತ್ತಾರೆ. ಸೇವೆಯಲ್ಲಿ ಮುಂದಾಳತ್ವ ವಹಿಸುವುದರಿಂದ ಅಂಥವರು ಸಭೆಗೆ ವರವಾಗಿದ್ದಾರೆ. ಸ್ಥಳೀಯ ಸಹೋದರರು ಮುಂದಾಳತ್ವ ವಹಿಸಲು ಅರ್ಹರಾಗುವ ತನಕ ಮಿಷನೆರಿಗಳೇ ಸಭೆಯನ್ನು ನೋಡಿಕೊಳ್ಳುತ್ತಾರೆ. ನೀವು ದೀಕ್ಷಾಸ್ನಾನ ಹೊಂದಿದ ಸಹೋದರರಾಗಿರುವುದಾದರೆ ಸಭೆಯಲ್ಲಿರುವ ಇತರರಿಗಾಗಿ ಸಹಾಯಮಾಡಲು ನಿಮ್ಮನ್ನೇ ನೀವು “ಎಟುಕಿಸಿಕೊಳ್ಳಲು” ಪ್ರಯತ್ನಿಸಬಾರದೇಕೆ?—1 ತಿಮೊ. 3:1.

ಇತರರಲ್ಲಿ ಬಲ ತುಂಬಿಸಿ

ಬೇಕಾದ ಸಹಾಯ ಕೊಡಿ

ಹುರುಪಿನಿಂದ ಸಾರುವುದು ಮತ್ತು ಸಭೆಯಲ್ಲಿ ಜವಾಬ್ದಾರಿ ತೆಗೆದುಕೊಳ್ಳುವುದರ ಜೊತೆಗೆ ಬೇರೆ ಇನ್ನಿತರ ಕ್ಷೇತ್ರಗಳಲ್ಲೂ ಸಭೆಗೆ ಸಹಾಯಮಾಡಬಹುದು. ಯುವಕರು, ಪ್ರಾಯಸ್ಥರು, ಪುರುಷರು, ಸ್ತ್ರೀಯರು ಹೀಗೆ ಎಲ್ಲರೂ ಇತರರಿಗೆ ಬಲ ತುಂಬಿಸಲು ನೆರವಾಗಬಹುದು.—ಕೊಲೊ. 4:11.

ನಮ್ಮ ಜೊತೆ ವಿಶ್ವಾಸಿಗಳಿಗೆ ಸಹಾಯ ಮಾಡಬೇಕೆಂದರೆ ನಾವು ಅವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು. ನಾವು ಒಟ್ಟಾಗಿ ಸೇರಿ ಬರುವಾಗ ‘ಪರಸ್ಪರ ಹಿತಚಿಂತಕರು’ ಆಗಿರಬೇಕೆಂದು ಬೈಬಲ್‌ ಉತ್ತೇಜಿಸುತ್ತದೆ. (ಇಬ್ರಿ. 10:24) ಅಂದರೆ ನಾವು ಇತರರ ವಿಷಯಗಳಲ್ಲಿ ತಲೆ ಹಾಕದೆ ಅವರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಹೀಗೆ ನಾವು ಅವರಿಗೆ ಪ್ರಾಯೋಗಿಕವಾಗಿ, ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಹಾಯ ಮಾಡಬಹುದು. ಎಲ್ಲಾ ಸಂದರ್ಭದಲ್ಲಿ ಜೊತೆ ವಿಶ್ವಾಸಿಗಳಿಗೆ ಸಹಾಯ ಮಾಡುವ ಜವಾಬ್ದಾರಿ ಹಿರಿಯರಿಗೆ ಮತ್ತು ಸಹಾಯಕ ಸೇವಕರಿಗೆ ಮಾತ್ರ ಇಲ್ಲ. ಹೌದು ಕೆಲವೊಂದಕ್ಕೆ ಅವರೇ ಸಹಾಯ ಮಾಡಬೇಕಾಗುತ್ತದೆ. (ಗಲಾ. 6:1) ಆದರೆ, ಕಷ್ಟದಲ್ಲಿರುವ ವೃದ್ಧ ಸಹೋದರ ಸಹೋದರಿಯರಿಗೆ ಅಥವಾ ಇತರ ಕುಟುಂಬಕ್ಕೆ ಎಲ್ಲರೂ ಸಹಾಯ ಮಾಡಬಹುದು.

ಜೀವನದ ಚಿಂತೆಯಲ್ಲಿರುವವರಿಗೆ ಭಾವನಾತ್ಮಕವಾಗಿ ಸಹಾಯ ಮಾಡಿ

ಒಂದು ಸಂದರ್ಭದಲ್ಲಿ ಸಾಲ್ವೆಟೋರ್‌ ಎನ್ನುವವರಿಗೆ ಆರ್ಥಿಕ ಮುಗ್ಗಟ್ಟಿನಿಂದಾಗಿ ತಮ್ಮ ಬಿಸ್‌ನೆಸ್‌, ಮನೆ ಮತ್ತು ಕುಟುಂಬದ ಹಲವಾರು ಆಸ್ತಿಗಳನ್ನು ಮಾರಬೇಕಾಯಿತು. ಹೀಗಿರುವಾಗ ಕುಟುಂಬ ನಡೆಸುವುದು ಹೇಗೆ ಎನ್ನುವ ಚಿಂತೆ ಬಂತು. ಸಭೆಯ ಇನ್ನೊಂದು ಕುಟುಂಬ ಈ ಅಗತ್ಯವನ್ನು ಅರ್ಥಮಾಡಿಕೊಂಡಿತು. ಅವರು ಆರ್ಥಿಕವಾಗಿ ಸಹಾಯ ಮಾಡಿದರು, ಸಾಲ್ವೆಟೋರ್‌ ಮತ್ತು ಅವರ ಹೆಂಡತಿಗೆ ಕೆಲಸ ಹುಡುಕಲು ಸಹಾಯ ಮಾಡಿದರು. ಅನೇಕ ಸಂಜೆ ಸಾಲ್ವೆಟೋರ್‌ ಕುಟುಂಬದೊಂದಿಗೆ ಸಮಯ ಕಳೆದರು ಮತ್ತು ಅವರಿಗೆ ಕಿವಿಗೊಟ್ಟರು, ಇಡೀ ಕುಟುಂಬಕ್ಕೆ ಪ್ರೋತ್ಸಾಹ ಕೊಟ್ಟು ಸಹಾಯ ಮಾಡಿದರು. ಅವರ ಸ್ನೇಹ ಬಾಂಧವ್ಯ ತುಂಬ ವರ್ಷಗಳಿಂದ ಹಾಗೆಯೇ ಇದೆ. ಆ ಕಷ್ಟದ ಸಮಯದಲ್ಲಿ ಒಟ್ಟಿಗೆ ಕಳೆದ ಸಮಯವನ್ನು ಎರಡು ಕುಟುಂಬಗಳು ಈಗಲೂ ನೆನಪಿಸಿಕೊಳ್ಳುತ್ತವೆ.

ನಿಜ ಕ್ರೈಸ್ತರಿಗೆ ಧರ್ಮ ಎನ್ನುವುದು ಖಾಸಗಿ ಸ್ವತ್ತಲ್ಲ. ಯೇಸು ಮಾಡಿದಂತೆ ನಾವು ಬೈಬಲಿನ ಅದ್ಭುತ ಪ್ರವಾದನೆಗಳ ಕುರಿತು ಎಲ್ಲರಿಗೂ ತಿಳಿಸಬೇಕು. ಹೆಚ್ಚಿನ ಅಗತ್ಯವಿರುವ ಸ್ಥಳಕ್ಕೆ ಹೋಗುವ ಸನ್ನಿವೇಶದಲ್ಲಿ ನಾವಿರಲಿ ಇಲ್ಲದಿರಲಿ ಎಲ್ಲರಿಗೂ ಒಳ್ಳೇದನ್ನು ಮಾಡಲು ನಾವು ಶ್ರಮಿಸಬೇಕು. ಇದನ್ನು ನಾವಿರುವ ಸಭೆಗಳಲ್ಲಿ ಖಂಡಿತ ಮಾಡಬಹುದು. (ಗಲಾ. 6:10) ಹೀಗೆ ಮಾಡಿದರೆ ಕೊಡೋದರಲ್ಲಿರುವ ಸಂತೋಷ ಎಷ್ಟಿದೆ ಎಂದು ನಮಗೆ ಗೊತ್ತಾಗುತ್ತದೆ ಮತ್ತು “ಪ್ರತಿಯೊಂದು ಸತ್ಕಾರ್ಯದಲ್ಲಿ ಫಲಕೊಡುತ್ತಾ” ಇರಲು ಸಹಾಯವಾಗುತ್ತದೆ.—ಕೊಲೊ. 1:10; ಅ. ಕಾ. 20:35.