ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಮೂರು ಮಂದಿ ಜೋಯಿಸರು” ಅವರು ಯಾರಾಗಿದ್ದರು?

“ಮೂರು ಮಂದಿ ಜೋಯಿಸರು” ಅವರು ಯಾರಾಗಿದ್ದರು?

“ಮೂರು ಮಂದಿ ಜೋಯಿಸರು” ಅವರು ಯಾರಾಗಿದ್ದರು?

ಯೇಸುವಿನ ಜನನದ ಕುರಿತಾದ ದೃಶ್ಯಗಳಲ್ಲಿ ಸಾಮಾನ್ಯವಾಗಿ, ನೀಳುಡುಪುಗಳನ್ನು ಧರಿಸಿರುವ ಮೂವರು ಮನುಷ್ಯರು ತಮ್ಮ ಒಂಟೆಗಳೊಂದಿಗೆ, ಶಿಶು ಯೇಸು ಗೋದಲಿಯಲ್ಲಿ ಮಲಗಿಕೊಂಡಿರುವ ಒಂದು ಕೊಟ್ಟಿಗೆಗೆ ಬರುತ್ತಿರುವುದನ್ನು ತೋರಿಸಲಾಗುತ್ತದೆ. ವೈಭವಯುತವಾದ ಬಟ್ಟೆಗಳನ್ನು ಧರಿಸಿಕೊಂಡಿರುವ ಈ ಸಂದರ್ಶಕರನ್ನು ಸರ್ವಸಾಮಾನ್ಯವಾಗಿ ಮೂರು ಮಂದಿ ಜೋಯಿಸರು ಎಂದು ಕರೆಯಲಾಗುತ್ತದೆ. ಅವರ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಬೈಬಲಿಗನುಸಾರ, ಈ ಮೂವರು ಜೋಯಿಸರು ‘ಮೂಡಣದೇಶದವರು’ ಆಗಿದ್ದು, ಅಲ್ಲಿ ಅವರಿಗೆ ಯೇಸುವಿನ ಜನನದ ಬಗ್ಗೆ ಸುದ್ದಿ ಸಿಕ್ಕಿತು. (ಮತ್ತಾಯ 2:​1, 2, 9) ಇವರು ಯೂದಾಯಕ್ಕೆ ಬಂದು ತಲಪಲು ತುಂಬ ಸಮಯ ಹಿಡಿದಿರಬೇಕು. ಅವರು ಕಟ್ಟಕಡೆಗೆ ಯೇಸುವನ್ನು ಕಂಡುಹಿಡಿದಾಗ, ಅವನು ಒಂದು ಕೊಟ್ಟಿಗೆಯಲ್ಲಿದ್ದ ನವಜನಿತ ಶಿಶುವಾಗಿರಲಿಲ್ಲ. ಅದಕ್ಕೆ ಬದಲಾಗಿ, ಮರಿಯಳನ್ನೂ ‘ಆ ಮಗುವನ್ನೂ’ ಆ ಜೋಯಿಸರು ಕಂಡುಹಿಡಿದಾಗ, ಅವರು ಒಂದು ಮನೆಯಲ್ಲಿ ವಾಸಿಸುತ್ತಿದ್ದರು.​—ಮತ್ತಾಯ 2:11.

ಬೈಬಲು ಈ ಪುರುಷರನ್ನು ‘ಜೋಯಿಸರು’ ಎಂದು ಕರೆಯುತ್ತದೆ, ಮತ್ತು ಇವರು ಎಷ್ಟು ಮಂದಿ ಇದ್ದರೆಂಬುದನ್ನು ಅದು ತಿಳಿಸುವುದಿಲ್ಲ. ದಿ ಆಕ್ಸ್‌ಫರ್ಡ್‌ ಕಂಪಾನ್ಯನ್‌ ಟು ದ ಬೈಬಲ್‌ ವಿವರಿಸುವುದು: “ತಮ್ಮನ್ನು ಬೇತ್ಲೆಹೇಮ್‌ಗೆ ನಡೆಸಿದ ನಕ್ಷತ್ರದತ್ತ ಆ ಸಂದರ್ಶಕರಿಗಿದ್ದ ಆಕರ್ಷಣೆಯು, ಮಂತ್ರವಿದ್ಯೆ ಮತ್ತು ಜೋತಿಷ್ಯಶಾಸ್ತ್ರದ ನಡುವಣ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.” ಬೈಬಲು ಸ್ಪಷ್ಟವಾಗಿ ಎಲ್ಲ ವಿಧದ ಮಂತ್ರವಿದ್ಯೆಯನ್ನೂ, ನಕ್ಷತ್ರಗಳ ಮುಖಾಂತರ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುವ ಬಾಬೆಲಿನ ಆಚರಣೆಯನ್ನು ಬಲವಾಗಿ ಖಂಡಿಸುತ್ತದೆ.​—ಧರ್ಮೋಪದೇಶಕಾಂಡ 18:​10-12; ಯೆಶಾಯ 47:13.

ಈ ಮನುಷ್ಯರಿಗೆ ರವಾನಿಸಲ್ಪಟ್ಟ ಮಾಹಿತಿಯು ಯಾವುದೇ ರೀತಿಯ ಒಳಿತಿಗೆ ನಡೆಸಲಿಲ್ಲ. ಅದು ದುಷ್ಟ ರಾಜನಾದ ಹೆರೋದನ ಈರ್ಷ್ಯೆಭರಿತ ಸಿಟ್ಟನ್ನು ಕೆರಳಿಸಿತು. ಇದು ಯೋಸೇಫ, ಮರಿಯಳು ಮತ್ತು ಯೇಸು ಐಗುಪ್ತಕ್ಕೆ ಪಲಾಯನಗೈಯುವುದಕ್ಕೆ ಮತ್ತು ಬೇತ್ಲೆಹೇಮ್‌ನಲ್ಲಿ “ಎರಡು ವರುಷದೊಳಗಿನ” ಎಲ್ಲಾ “ಗಂಡುಕೂಸುಗಳ” ಹತ್ಯೆಗೆ ನಡಿಸಿತು. ಹೆರೋದನು ಆ ಜೋಯಿಸರಿಂದ ಏನನ್ನು ತಿಳಿದುಕೊಂಡನೊ ಅದರ ಆಧಾರದ ಮೇರೆಗೆ ಯೇಸುವಿನ ಜನನದ ಸಮಯವನ್ನು ಜಾಗರೂಕತೆಯಿಂದ ಕಂಡುಹಿಡಿದನು. (ಮತ್ತಾಯ 2:16) ಅವರ ಭೇಟಿಯಿಂದಾಗಿ ಉಂಟಾದ ಈ ಎಲ್ಲ ತೊಂದರೆಗಳನ್ನು ನೋಡುವಾಗ, ಅವರು ನೋಡಿದಂಥ ಆ ನಕ್ಷತ್ರ ಮತ್ತು “ಯೆಹೂದ್ಯರ ಅರಸನಾಗಿ ಹುಟ್ಟಿದವನ” ಬಗ್ಗೆ ಅವರು ಪಡೆದ ಸಂದೇಶವು, ಯೇಸುವನ್ನು ಕೊಂದುಹಾಕಲು ಹಾತೊರೆಯುತ್ತಿದ್ದ ದೇವರ ಶತ್ರುವಾದ ಪಿಶಾಚನಾದ ಸೈತಾನನಿಂದ ಬಂತೆಂಬ ನಿರ್ಣಯಕ್ಕೆ ಬರುವುದು ನ್ಯಾಯಸಮ್ಮತವಾಗಿದೆ.​—ಮತ್ತಾಯ 2:​1, 2.