ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 12

ಸ್ನೇಹಭಾವ ಮತ್ತು ಪರಚಿಂತನೆ

ಸ್ನೇಹಭಾವ ಮತ್ತು ಪರಚಿಂತನೆ

1 ಥೆಸಲೊನೀಕ 2:7, 8

ಏನು ಮಾಡಬೇಕು: ಪ್ರೀತಿ-ಕಾಳಜಿಯಿಂದ ಮಾತಾಡಿ.

ಹೇಗೆ ಮಾಡಬೇಕು:

  • ನಿಮ್ಮ ಕೇಳುಗರ ಬಗ್ಗೆ ಯೋಚಿಸಿ. ಅವರಿಗಿರುವ ಸಮಸ್ಯೆಗಳ ಬಗ್ಗೆ ಯೋಚಿಸಿ. ಅವರ ಸ್ಥಾನದಲ್ಲಿ ನಿಂತು ನೋಡಿ. ಹೀಗೆ ನಿಮ್ಮ ಹೃದಯವನ್ನು ಸಿದ್ಧಮಾಡಿಕೊಳ್ಳಿ.

  • ಯಾವ ಪದಗಳನ್ನು ಉಪಯೋಗಿಸಿ ಮಾತಾಡಬೇಕೆಂದು ತೀರ್ಮಾನಿಸಿ. ನಿಮ್ಮ ಮಾತುಗಳಿಂದ ಕೇಳುಗರಿಗೆ ಚೈತನ್ಯ, ಸಾಂತ್ವನ, ಬಲ ಸಿಗಬೇಕು. ಅನಾವಶ್ಯಕವಾಗಿ ಅವರಿಗೆ ನೋವು ತರುವ ರೀತಿ ಮಾತಾಡಬೇಡಿ. ಯೆಹೋವನ ಆರಾಧಕರಲ್ಲದ ಜನರ ಬಗ್ಗೆ ಮತ್ತು ಅವರು ನಂಬುವ ವಿಷಯಗಳ ಬಗ್ಗೆ ಕೀಳಾಗಿ ಮಾತಾಡಬೇಡಿ.

  • ಆಸಕ್ತಿ ತೋರಿಸಿ. ನಿಮಗೆ ನಿಮ್ಮ ಕೇಳುಗರ ಮೇಲೆ ನಿಜವಾದ ಕಾಳಜಿ ಇದೆ ಎಂದು ನಿಮ್ಮ ಸ್ವರ ಮತ್ತು ಸೂಕ್ತವಾದ ಸನ್ನೆಗಳ ಮೂಲಕ ತೋರಿಸಿ. ಮುಖಭಾವದ ಕಡೆ ಕೂಡ ಗಮನ ಕೊಡಿ. ಮುಖದಲ್ಲಿ ಮುಗುಳ್ನಗೆ ಇರಲಿ.