ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 3

ಪ್ರಶ್ನೆಗಳ ಉಪಯೋಗ

ಪ್ರಶ್ನೆಗಳ ಉಪಯೋಗ

ಮತ್ತಾಯ 16:13-16

ಏನು ಮಾಡಬೇಕು: ಆಸಕ್ತಿ ಹುಟ್ಟಿಸಿ ಅದನ್ನು ಹಿಡಿದಿಡಲು, ಸರಿಯಾದ ತೀರ್ಮಾನಕ್ಕೆ ಬರುವಂತೆ ಮಾಡಲು, ಮುಖ್ಯಾಂಶಗಳನ್ನು ಒತ್ತಿಹೇಳಲು ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳಿ.

ಹೇಗೆ ಮಾಡಬೇಕು:

  • ಆಸಕ್ತಿ ಹುಟ್ಟಿಸಿ ಕೊನೆ ತನಕ ಕಡಿಮೆಯಾಗದಂತೆ ನೋಡಿಕೊಳ್ಳಿ. ಕುತೂಹಲ ಕೆರಳಿಸುವ ಅಥವಾ ಯೋಚಿಸುವಂತೆ ಮಾಡುವ ಪ್ರಶ್ನೆಗಳನ್ನು ಕೇಳಿ.

  • ಒಳ್ಳೇ ತೀರ್ಮಾನಕ್ಕೆ ಬರಲು ಸಹಾಯ ಮಾಡಿ. ನೀವು ಹೇಳುವ ವಿಷಯ ಸರಿಯಾಗಿದೆ ಎಂದು ಕೇಳುಗರು ಅರ್ಥಮಾಡಿಕೊಂಡು ಒಳ್ಳೇ ತೀರ್ಮಾನಕ್ಕೆ ಬರಲು ಪ್ರಶ್ನೆಗಳನ್ನು ಕೇಳಿ.

  • ಮುಖ್ಯಾಂಶಗಳನ್ನು ಒತ್ತಿಹೇಳಿ. ಒಂದು ಮುಖ್ಯಾಂಶವನ್ನು ಹೇಳುವ ಮುಂಚೆ ಯೋಚಿಸುವಂತೆ ಮಾಡುವ ಪ್ರಶ್ನೆಯನ್ನು ಕೇಳಿ. ಒಂದು ಮುಖ್ಯಾಂಶದ ಬಗ್ಗೆ ಮಾತಾಡಿದ ಮೇಲೆ ಅಥವಾ ನಿಮ್ಮ ಭಾಗವನ್ನು ಮುಗಿಸುವಾಗ ಮಾತಾಡಿದ ವಿಷಯವನ್ನು ಮನಸ್ಸಲ್ಲಿ ಉಳಿಯುವಂತೆ ಮಾಡಲು ಪ್ರಶ್ನೆಗಳನ್ನು ಕೇಳಿ.